ಮೈಸೂರು: ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು

ಇದೇ ವೇಳೆ ಗ್ರಾಹಕರ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಈ ವೇಳೆ 2024ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಗಸ್ತ್ಯ ಸೊಸೈಟಿಯ ಸದಸ್ಯರಾದ ಶ್ರೀಕಾಂತ್ ಕಶ್ಯಪ್, ರಂಗನಾಥ್, ಮಹಾಲಿಂಗ, ಜಾನಕಿ ರಾಮ್ ಹಾಗೂ
ಕನ್ನಡ ರಾಜ್ಯೋತ್ಸವ ಅಂಗವಾಗಿ ಆಸ್ಟ್ರೇಲಿಯಾದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಡಿಂಡಿಮ ಪ್ರಶಸ್ತಿ ಪಡೆದ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅದಕ್ಕೂ ಮುನ್ನ ಮೈಸೂರು ಮಹಲಿಂಗು ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು, ವಿದ್ವಾನ್ ಸುಮಂತ್ ತಂಡದಿಂದ ವೇದಘೋಷ ನಡೆಯಿತು.
ನಂತರ ಸದ್ಯಸರಿಗೆ ಹಾಗೂ ಅವರ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಇದೇ ವೇಳೆ 2025 ನೇ ಇಸವಿಯ ದಿನದರ್ಶಿನಿಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್ ವಿ ರಾಜೀವ್ ಬಿಡುಗಡೆಗೊಳಿಸಿ ಮಾತನಾಡಿದರು.
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎಂ ಡಿ ಗೋಪಿನಾಥ್,
ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ ಹಾಗೂ ಖಜಾಂಚಿ ಕೆ ನಾಗರಾಜ
ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಹಿರಿಯ ಪ್ರವರ್ತಕರಾದ ಪ್ರಭಾಕರ್, ಎಚ್ ಎಸ್ ಶೇಷಗಿರಿ,ನಿರ್ದೇಶಕ ಮಂಡಲಿ ಸದಸ್ಯರಾದ ಸಹಕಾರ ರತ್ನ ಸಿ ವಿ ಪಾರ್ಥಸಾರಥಿ, ಪ್ರಶಾಂತ್ ತಾತಾಚಾರ್ ಹೆಚ್ ಎಸ್ ,ಬಾಲಕೃಷ್ಣ ಎಂ ಆರ್,ಚೇತನ್, ಹೆಚ್ ಪಿ, ಪಣಿರಾಜ್ ಎನ್,ಮಹಿಮ ಪಿ, ನಾಗಶ್ರೀ. ಎನ್ ,ಕೆ ಎನ್ ಅರುಣ್, ಶಿವರುದ್ರಪ್ಪ, ಶಾಶ್ವತಿ ನಾಯಕ ಎಂ ಪಿ, ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
