ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕೋತ್ಸವ: ವಿವಿಧ ಸ್ಪರ್ಧೆಗಳಿಗೆ ಚಾಲನೆ

Spread the love

ಮೈಸೂರು: ಮೈಸೂರಿನ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸೊಸೈಟಿಯ ಸದಸ್ಯರಿಗೆ ಹಾಗೂ ಮಕ್ಕಳಿಗೆ
ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.

ಭಗವದ್ಗೀತಾ ಶ್ಲೋಕ ಪಠಣ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಹಿಳೆ ಮತ್ತು ಪುರುಷ ಸದಸ್ಯರಿಗೆ ಜನಪದ ಭಾವಗೀತೆ, ದೇವರ ನಾಮ ಗೀತೆ ಸ್ಪರ್ಧೆ ಹಾಗೂ ವಿವಿಧ ಕ್ರೀಡೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಸದಸ್ಯರು ಹಾಗೂ ಅವರ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ದೀಪಾ ಬೆಳಗಿಸಿ ನಂತರ ಗಿಡಕ್ಕೆ ನೀರು ಹಾಕುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದ ಸೊಸೈಟಿಯ ಅಧ್ಯಕ್ಷ ಎಂ. ಡಿ ಗೋಪಿನಾಥ್,ಸ್ಪರ್ಧಿಸಿದ ಎಲ್ಲ ಸದಸ್ಯರಿಗೂ ಶುಭಕೋರಿದರು.

ಇದೇ ತಿಂಗಳು ಬುಧವಾರ 25ರಂದು ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ಶ್ರೀ ರಾಮಮಂದಿರದಲ್ಲಿ ಸ್ಪರ್ಧಿಸಿದ ವಿಜೇತರಿಗೆ ಬಹುಮಾನ ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.

ಹಾಗೆಯೇ 2024ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರುಸ್ಕೃತರಾದ ಸದ್ಯಸರಿಗೆ ಸನ್ಮಾನ ಹಾಗೂ ಸೊಸೈಟಿಯ ಗ್ರಾಹಕರ ಸಂವಾದ ಕಾರ್ಯಕ್ರಮವು ಸಹ ಆಯೋಜಿಸಲಾಗಿದೆ ಎಂದು ಹೇಳಿದರು.

ಸಹಕಾರಿ ರತ್ನ ಹಾಗೂ ಸೊಸೈಟಿಯ ನಿರ್ದೇಶಕರಾದ ಸಿ ವಿ ಪಾರ್ಥಸಾರಥಿ ಮಾತನಾಡಿ,ವಿದ್ಯಾರ್ಥಿಗಳು ಸಂಸ್ಕಾರ, ಸೇವಾ ಮನೋಭಾವ ರೂಢಿಸಿಕೊಳ್ಳುವುದರ ಜತೆಗೆ ಆಧುನಿಕ ಯುಗದಲ್ಲಿ ಎಲ್ಲ ಸ್ಪರ್ಧೆಗಳನ್ನು ಎದುರಿಸುವ ಮನೋಸ್ಥೆರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು

ಇದೇ ಸಂದರ್ಭದಲ್ಲಿ ತೀರ್ಪುಗಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ, ಖಜಾಂಚಿ ಕೆ ನಾಗರಾಜ, ನಿರ್ದೇಶಕ ಮಂಡಲಿ ಸದಸ್ಯರಾದ ಸಿ. ವಿ ಪಾರ್ಥಸಾರಥಿ, ಎಂ. ಆರ್. ಬಾಲಕೃಷ್ಣ ,ಹೆಚ್ ಪಿ ಚೇತನ್,
ಎನ್.ಪಣಿರಾಜ್,ವಿಕ್ರಂ ಅಯ್ಯಂಗಾರ್,ಪಿ.
ಮಹಿಮ,ಎನ್ ನಾಗಶ್ರೀ,ಶಿವರುದ್ರಪ್ಪ, ಹಾಗೂ ಸೊಸೈಟಿ ಸದಸ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.