ಅಗಸ್ತ್ಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಯಲ್ಲಿ ರಾಜ್ಯೋತ್ಸವ, ಧನಲಕ್ಷ್ಮಿ ಪೂಜೆ

ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂ ನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಹಾಗೂ ಧನಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

ಶ್ರೀ‌ ಭುವನೇಶ್ವರಿ‌ ದೇವಿಯ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ಮಾಡಲಾಯಿತು.

ಈ ವೇಳೆ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ ಡಿ ಗೋಪಿನಾಥ್,
ಉಪಾಧ್ಯಕ್ಷೆ ಎಂ ಎನ್ ಸೌಮ್ಯ, ಖಜಾಂಚಿ ಕೆ ನಾಗರಾಜ,ನಿರ್ದೇಶಕ ಮಂಡಲಿ ಸದಸ್ಯರಾದ ಸಿ ವಿ ಪಾರ್ಥಸಾರಥಿ, ಹೆಚ್ ಎಸ್. ಪ್ರಶಾಂತ್ ತಾತಾಚಾರ್,ಎಂ ಆರ್. ಬಾಲಕೃಷ್ಣ,
ಹೆಚ್ ಪಿಚೇತನ್,ಎನ್.ಪಣಿರಾಜ್ , ವಿಕ್ರಂ ಅಯ್ಯಂಗಾರ್,ಪಿ.ಮಹಿಮ, ಎನ್ ನಾಗಶ್ರೀ, ಕೆ ಎನ್ ಅರುಣ್, ಶಿವರುದ್ರಪ್ಪ,ಎಸ್ ರಾಜಮ್ಮ , ಎಂ ಪಿ.ಶಾಶ್ವತಿ ನಾಯಕ,
ಪ್ರಭಾರ ಕಾರ್ಯದರ್ಶಿ ಎನ್ ವೀಣಾ ಮತ್ತು ಸೊಸೈಟಿ ಸದಸ್ಯರು, ಸಿಬ್ಬಂದಿ ವರ್ಗ ಹಾಜರಿದ್ದರು.