ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸಿ: ತನ್ವೀರ್ ಸೇಠ್

Spread the love

ಮೈಸೂರು, ಆ.1: ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು
ಶಾಸಕರಾದ ತನ್ವೀರ್ ಸೇಠ್ ಅವರು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಮೈಸೂರು ಇವರ ಸಹಯೋಗದಲ್ಲಿ ಡಾ. ಮಹಾಂತೇಶ್ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಯುವ ಜನತೆ ಯಾವದೇ ವ್ಯಸನಗಳಿಗೆ ಒಳಗಾಗಬಾರದು ಎಂದು ಸಲಹೆ ನೀಡಿದರು.

ಸಮಾಜವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಯುವಜನತೆಯ ಮೇಲೆ ಇದೆ. ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ನಿಮ್ಮ ಕೊಡುಗೆ ಅಪಾರವಾದದ್ದು. ವಿಧ್ಯಾರ್ಥಿ ಸಮೂಹ ಇಂದು ಬಹುಬೇಗ ಮಾದಕ ವಸ್ತುಗಳಿಗೆ ಒಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ ಅಪರಾದ ಎಂದು ತಿಳಿಹೇಳಿದರು.

ಮೊಬೈಲ್ ಕೂಡ ಒಂದು ವ್ಯಸನವಾಗಿದೆ ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಬಳಕೆ ಮಾಡಬೇಕು. ವಿಧ್ಯಾರ್ಥಿ ದೆಸೆಯಲ್ಲಿ ಓದಿನ ಕಡೆ ಹೆಚ್ಚಿನ ಗಮನ ಕೊಡಬೇಕು ಎಂದು ಕಿವಿಮಾತು ಹೇಳಿದರು.

ಯಾವುದೇ ಸಮಾಜಕ್ಕೆ ಹಾನಿಕರವಾದ ವಸ್ತುಗಳನ್ನು ತ್ಯಜಿಸಬೇಕು, ಸಮಾಜವನ್ನು ಜೋಡಿಸುವಂತಹ ಕೆಲಸವನ್ನು ಪ್ರತಿಯೊಬ್ಬರು ಮಾಡೋಣ. ಮಹಾಂತೇಶ ಶಿವಯೋಗಿಗಳ ಜೀವನ ಮೌಲ್ಯಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತನ್ವೀರ್ ಸೇಠ್‌ ಕರೆ ನೀಡಿದರು. ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ ಅವರು ಮಾತನಾಡಿ, ಯಾರು ಮಾದಕ ವಸ್ತುಗಳ ಸೇವನೆಗೆ ಒಳಗಾಗಬಾರದು. ಈ ಬಗ್ಗೆ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸುತ್ತಾ ಇದ್ದಾರೆ. ವಿಧ್ಯಾರ್ಥಿಗಳು ಮೊಬೈಲ್ ಹೆಚ್ಚು ಬಳಕೆ ಮಾಡಬಾರದು. ಹೆಚ್ಚು ಮೊಬೈಲ್ ಬಳಕೆ ನಮ್ಮ ಮೆದುಳಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜು ಅವರು ಮಾತನಾಡಿ ಪೂಜ್ಯ ಡಾ ಮಹಾಂತೇಶ ಶಿವಯೋಗಿ ಸ್ವಾಮಿಜಿಯವರು ಭಕ್ತರ ಬಳಿ ಜೋಳಿಗೆಯನ್ನು ಹಿಡಿದು ತಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಯಲ್ಲಿ ಹಾಕಿ, ಈ ಮೂಲಕ ತಮ್ಮ ದುಶ್ಚಟಗಳನ್ನು ತ್ಯಜಿಸಿ ಎಂದು ಅರಿವು ಮೂಡಿಸಿದ್ದರು ಆದ್ದರಿಂದ ಇವರ ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮನೋ ವೈದ್ಯ ತಜ್ಞರಾದ ಡಾ. ಮಂಜುಶ್ರೀ ಅವರು ವಿಶೇಷ ಉಪನ್ಯಾಸ ನೀಡಿ,
ಗಾಂಜಾ ಬಳಕೆ ಹೆಚ್ಚಿನ ಮತ್ತು ಬರಿಸುತ್ತದೆ. ಇದು ಪ್ರತಿಯೊಬ್ಬರ ಮೇಲೆ ಅನುಮಾನ ಮೂಡಿಸುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳು ಆರಂಭದಲ್ಲಿ ಕಾಣಿಸುವುದಿಲ್ಲ. ನಿರಂತರವಾಗಿ ಬಳಕೆ ಮಾಡುತ್ತಾ ಹೋದಂತೆ ದುಸ್ಪರಿಣಾಮಗಳು ಗೋಚರಿಸುತ್ತವೆ. ಅಪೀಮನ್ನು ಗಿಡದಿಂದ ಬೆಳದು ಮಾರಾಟ ಮಾಡುತ್ತಾರೆ. ಇದನ್ನು ಮೂಗಿನ ಮೂಲಕ, ಇಂಜೆಕ್ಷನ್ ಮೂಲಕ, ನಾಲಿಗೆಯ ಕೆಳಗೆ ಇಟ್ಟುಕೊಂಡು ಪಡೆಯುತ್ತಾರೆ. ಇದರ ದುಷ್ಪರಿಣಾಮ ಅತಿ ಹೆಚ್ಚು. ಇದನ್ನು ಹೆಚ್ಚು ತೆಗೆದುಕೊಂಡರೆ ಓವರ್ ಡೋಸ್ ಆಗಿ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಹೆಚ್ಚು ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಮಲೈ ಮಾದೇಶ್ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.