ಮೈಸೂರು: ಕಾಂತರ ಚಾಪ್ಟರ್ 1ಅದ್ಭುತ ಯಶಸ್ಸಿನ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿರುವ ನಿರ್ದೇಶಕರು ಹಾಗೂ
ನಾಯಕ ನಟ ರಿಷಬ್ ಶೆಟ್ಟಿ ಅವರನ್ನು ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಶುಭ ಹಾರೈಸಿದರು.
ಮುಖಂಡರಾದ ಜಿ. ಶ್ರೀನಾಥ್ ಬಾಬು ಅವರು ರಿಷಬ್ ಶಟ್ಟಿ ಅವರಿಗೆ ಚಾಮುಂಡೇಶ್ವರಿ ಭಾವಚಿತ್ರ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ಕಿರಣ್, ಎಸ್ ಎನ್ ರಾಜೇಶ್, ಲೋಕೇಶ್, ರವಿಚಂದ್ರ, ಅಮಿತ್ ಮತ್ತಿತರರು ರಿಷಬ್ ಅವರಿಗೆ ಶುಭ ಕೋರಿದರು.