ಮೈಸೂರು: ಜನಿವಾರ ಧಾರಣೆ ಧರ್ಮಜಾಗೃತಿಯ ಪ್ರತೀಕವಾಗಿದೆ ಎಂದು
ಕರ್ನೂಲು ಜಿಲ್ಲೆಯ ಶ್ರೀ ಶಾರದ ದತ್ತಪೀಠ ಶ್ರೀ ಶಂಕರಾನಂದ ಮಹಾಸಂಸ್ಥಾನಂ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಸ್ವಾಮಿಗಳು ತಿಳಿಸಿದರು.
ಮೈಸೂರಿನ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಶಂಕರ ರಾಮಾನುಜರ ಜಯಂತಿ ಪ್ರಯುಕ್ತ ಆಚಾರ್ಯತ್ರಯರ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಈ ವೇಳೆ ಆಚಾರ್ಯತ್ರಯರ ಭಾವಚಿತ್ರಕ್ಕೆ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಸ್ವಾಮಿಗಳು ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಭಕ್ತರಿಗೆ ಆಶೀರ್ವದಿಸಿ ಮಾತನಾಡಿದರು.

ಬ್ರಹ್ಮತೇಜಸ್ಸು ಜ್ಞಾನವನ್ನ ಪಡೆಯಬೇಕಾದರೆ ವಿಪ್ರರು ಜನಿವಾರಧಾರಣೆ ಮಾಡಿ ಧರ್ಮಜಾಗೃತಿಗಾಗಿ ದ್ವಿಜರಾಗುತ್ತಾರೆ, ಉಪನಯನವಾದ ಬಳಿಕ ವೇದ ಉಪನಿಷತ್, ಶಾಸ್ತ್ರ, ಧರ್ಮರಕ್ಷಣೆಗಾಗಿ ತ್ರಿಕಾಲ ಗಾಯತ್ರಿ ಜಪ ಅನುಷ್ಠಾನ ಮಾಡುವಲ್ಲಿ ಸಫಲರಾಗಬೇಕು ಎಲ್ಲ ತಿಳಿಹೇಳಿದರು.
ತಪಸ್ಸು ಪ್ರಾರ್ಥನೆಯಾಗಿ ಸಂಕಲ್ಪವು ಧ್ಯಾನವಾದರೆ ಮನುಷ್ಯನ ಏಕಾಗ್ರತೆ ಮನಸ್ಸಿನ ನಿಯಂತ್ರಣವಾಗಿ ಸನ್ಮಾರ್ಗದ ಸಾಧನೆಯತ್ತ ಗುರಿಸಾಧಿಸಬಹುದು ಎಂದು ತಿಳಿಸಿದರು.
ಶಾಲಾ ಕಾಲೇಜಿನಲ್ಲಿ ಉತ್ತೀರ್ಣರಾಗುವ ಹಾಗೇ ಯುವಪೀಳಿಗೆ ಸಾಮಜದಲ್ಲೂ ಉತ್ತಮ ನಡೆನುಡಿ ಸಂಸ್ಕಾರದಿಂದ ಸಮಾಜದ ಆಸ್ಥಿಯಾಗಿ ನಿರ್ಮಾಣವಾಗಬೇಕು ಎಂದು ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಸ್ವಾಮಿಗಳು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಶ್ರೀರಾಮಮಂದಿರ ಕಾರ್ಯದರ್ಶಿ ಮಾಧುರಾವ್, ಶೇಷಾದ್ರಿ, ಟಿ.ಕೆ. ಶ್ರೀನಿವಾಸನ್, ಹರಿಹರಪುರ ಮಠದ ವ್ಯವಸ್ಥಾಪಕ ಶ್ರೀನಿವಾಸ್, ವೆಂಕಟೇಶಯ್ಯ, ಅರ್ಚಕ ಸಂತೋಷ್, ನಿರೂಪಕ ಅಜಯ್ ಶಾಸ್ತ್ರಿ, ಅಗಸ್ತ್ಯ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್, ಬಿಜೆಪಿ ಮುಖಂಡ ಕೆ.ಎಂ ನಿಶಾಂತ್, ಕೇಶವಪ್ರಸಾದ್, ಮಿರ್ಲೆ ಪಣೀಶ್ ಇನ್ನಿತರರು ಉಪಸ್ಥಿತರಿದ್ದರು.