ಮೈಸೂರು: ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲ್ಲೂಕಿನ ಕಡಗನಹಳ್ಳಿ ಗ್ರಾಮದ ನಿವಾಸಿ ಶ್ಯಾಮಿಯೋಲ್ (22) ಮೃತಪಟ್ಟ ಯುವಕ.
ಮತ್ತೊಬ್ಬ ಸವಾರ ನವೀನ್ (26)ಗೆ ಗಂಭೀರ ಗಾಯಗಳಾಗಿದ್ದು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪ ಮಾರ್ಗವಾಗಿ ಕುಶಾಲನಗರಕ್ಕೆ ಹೀರೋ ಹೋಂಡಾ ಬೈಕ್ ನಲ್ಲಿ ಈ ಇಬರೂ ಬರುತ್ತಿದ್ದರು.
ಈ ವೇಳೆ ಕುಶಾಲನಗರದಿಂದ ಪಿರಿಯಾಪಟ್ಟಣ ಕಡೆಗೆ ಬರುತ್ತಿದ್ದ ಲಾರಿ ಬೈಕ್ ಡಿಕ್ಕಿಯಾಗಿವೆ, ಬೈಲುಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.