ಮೈಸೂರು: ಅಭ್ಯುದಯ ಸಂಸ್ಥೆಯು ಶಿಕ್ಷಣದ ಮೂಲಕ ಸಮಾಜದಲ್ಲಿ ಸಾಮಾಜಿಕವಾಗಿ ವಂಚಿತ ವರ್ಗಗಳನ್ನು ಸಬಲೀಕರಣ ಗೊಳಿಸುವ ಕೆಲಸ ಮಾಡುತ್ತಿದ್ದು,ಈ ವರ್ಷ ಮೈಸೂರಿನಲ್ಲಿ ಆರೋಹಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ನಗರದ ಬಿಎಸ್ಎಸ್ ವಿದ್ಯೋದಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರೋಹಣ ಕಾರ್ಯಕ್ರಮದಲ್ಲಿ ನಾಗಮಂಗಲ, ಮಂಡ್ಯ ,ನರಸಮಂಗಲ, ಹೆಚ್‍ಡಿ ಕೋಟೆ, ಚಾಮರಾಜನಗರ, ಸೋಮವಾರಪೇಟೆ, ಗುಂಡ್ಲುಪೇಟೆ, ಮೈಸೂರು ಮುಂತಾದ ಗ್ರಾಮೀಣ ಪ್ರದೇಶಗಳಿಂದ ಸುಮಾರು ಎಂಟುನೂರು ಮಕ್ಕಳು ಭಾಗವಹಿಸಿದ್ದರು.
ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್ ನ ಅಧ್ಯಕ್ಷರಾದ ಪ್ರೊ. ಉದಯ ಬಿರ್ಜೆ ರಘುನಾಥ್ ಹಾಗೂ ಸೈಕ್ಲೊಪ್ಸ್ ಮೆಡ್ಟೆಕ್ ನ ಸಹ ಸಂಸ್ಥಾಪಕರಾದ ನಿರಂಜನ ಸುಬ್ಬರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಚಿತ್ರಕಲೆ, ಭಗವದ್ಗೀತೆ, ದೇಶಭಕ್ತಿ ಗೀತೆ, ಏಕಾತ್ಮತ ಸ್ತೋತ್ರ, ಸೂರ್ಯ ನಮಸ್ಕಾರ, ಜಾನಪದ ನೃತ್ಯ ಸ್ಪರ್ಧೆಗಳನ್ನು ನಾಲ್ಕರಿಂದ ಆರನೇ ತರಗತಿಯವರೆಗೆ ಒಂದು ವಿಭಾಗದಲ್ಲಿ ಹಾಗೂ ಏಳರಿಂದ 9ನೇ ತರಗತಿಗೆ ಮತ್ತೊಂದು ವಿಭಾಗದಲ್ಲಿ ಆಯೋಜಿಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ನಾರಾಯಣ.ಡಿ , ಮೈಸೂರು ಉಸ್ತುವಾರಿ ಕಾರ್ಯದರ್ಶಿಗಳಾದ ಪಣಿಂದ್ರ ಬೆಳ್ಳೂರು, ವಿದ್ಯಾಶಂಕರ್, ಮಂಜುನಾಥ್, ವೇಣುಗೋಪಾಲ್, ಯೋಜನೆಯ ಸಂಯೋಜಕರಾದ ಮನೀಶ್, ಅಜಿತ್, ಸಿದ್ಲಿಂಗ್,ಅನ್ನಪೂರ್ಣ, ಸುಮತಿ ಮುಂತಾದವರು ಉಪಸ್ಥಿತರಿದ್ದರು.

