ಮೈಸೂರು: ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಪಂಚಮುಖಿ ಆಂಜನೇಯ ಸ್ವಾಮಿ ಆಶೀರ್ವಾದದಿಂದ ಒಳಿತಾಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎನ್ ಎಂ ನವೀನ್ ಕುಮಾರ್ ಹೇಳಿದರು.
ನಗರದ ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಮಹಾಮಂಗಳಾರತಿ ನೆರವೇರಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸೈನಿಕರ ಆರೋಗ್ಯ ದೇಶದ ಸುರಕ್ಷತೆ ಹಾಗೂ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ನವೀನ್ ಕುಮಾರ್,
ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆಯ ಯೋಧರು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧಂಸ ಮಾಡಿರುವ ಕೀರ್ತಿ ಭಾರತೀಯ ಸೇನೆಗೆ ಸಲ್ಲುತ್ತದೆ ಎಂದು ತಿಳಿಸಿದರು.

ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ ಭಾರತೀಯ 26 ಜನ ಯುವಕರು ಸಾವನ್ನಪ್ಪಿದ್ದರು. ಮಹಿಳೆಯರ ಕುಂಕುಮ ಅಳಿಸಿತ್ತು,ಇದಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಮಹಿಳಾ ಕಮಾಂಡರ್ ಮೂಲಕ ಪಾಕಿಸ್ತಾನದ ಒಳ ನುಗ್ಗಿ 9 ಉಗ್ರಗಾಮಿಗಳ ನೆಲೆಗಳನ್ನ ಧ್ವಂಸ ಮಾಡಿರುವ ಕೀರ್ತಿ ನಮ್ಮ ಸೈನಿಕರಿಗೆ ಸಲ್ಲುತ್ತದೆ. ಆದ್ದರಿಂದ ಪಂಚಮುಖಿ ಆಂಜನೇಯ ಸ್ವಾಮಿ ನಮ್ಮ ದೇಶದ ಸೇನೆಗೆ ಹಾಗೂ ಯೋಧರಿಗೆ ಉತ್ತಮ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್, ಅರ್ಚಕರ ಸಂಘದ ಅಧ್ಯಕ್ಷ ವಿದ್ವಾನ್ ಕೃಷ್ಣಮೂರ್ತಿ, ಮೈಸೂರು ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಶ್ರೀಕಾಂತ್ ಕಶ್ಯಪ್,ಟಿ ಎಸ್ ಅರುಣ್, ರಂಗನಾಥ್, ಚಕ್ರಪಾಣಿ, ಸುಚೇಂದ್ರ, ಅಪೂರ್ವ ಸುರೇಶ್, ಜತ್ತಿ ಪ್ರಸಾದ್, ರವಿಶಂಕರ್, ವಿಶ್ವನಾಥ್, ವಿಜ್ಞೇಶ್ವರ ಭಟ್,ರಾಮು, ನಾ.ಸು ನಾಗರಾಜ, ಎ ಎಸ್ ನಾಗೇಶ ಮತ್ತಿತರರು ಪೂಜೆಯಲ್ಲಿ ಭಾಗವಹಿಸಿದ್ದರು.