ಆದಿ ಲೋಕೇಶ್ ಅವರದು ಹುಟ್ಟು ಕಲಾವಿದರ ಕುಟುಂಬ: ಸುಚೇಂದ್ರ ಪ್ರಸಾದ್

Spread the love

ಮೈಸೂರು: ಆದಿ ಲೋಕೇಶ್ ಅವರ ಕುಟುಂಬ ಹುಟ್ಟು ಕಲಾವಿದರ ಕುಟುಂಬ ಎಂದು ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್ ಬಣ್ಣಿಸಿದರು.

ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹಶ್ರೀ ಪಬ್ಲಿಕ್ ಶಾಲೆಯಲ್ಲಿ
ಚಿತ್ರನಟ ಆದಿ ಲೋಕೇಶ್ ಅವರ ಸಾರಥ್ಯದಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಅಭಿನಯ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ,
ನಂತರ ವೇದಿಕೆಯ ಕಾರ್ಯಕ್ರಮವನ್ನು ಕಲಾ ಸರಸ್ವತಿಗೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೈಸೂರಿನ ಜೆಪಿ ನಗರದ ಮಹರ್ಷಿ ಸ್ಕೂಲ್ ನಲ್ಲಿ ಆರಂಭವಾದ ಕಾರ್ಯಗಾರ
ಏ 9ರಿಂದ ಮೇ 10ರ ವರೆಗೆ ನಡೆಯಲಿರುವ ರಂಗ ಚಟುವಟಿಕೆಗಳು ನಡೆಯಲಿವೆ.

ಆದಿ ಲೋಕೇಶ್ ಕುಟುಂಬ ಹುಟ್ಟು ಕಲಾವಿದರ ಕುಟುಂಬ,
ಆದಿಯ ಕನಸು ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಅನ್ನುವಂತಿದೆ,ಇಡೀ ಜೀವನವನ್ನು ಕಲಾ ಸೇವೆಗೆ ಮುಡಿಪಾಗಿಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇದಿಕೆಯ ಶೀರ್ಷಿಕೆಯೇ ವಿಭಿನ್ನವಾಗಿದೆ.
ಇದಕ್ಕೆ ಆದಿ ಇದೆ ಅಂತ್ಯ ಇಲ್ಲ,
ನಿರಂತರವಾಗಿ ನಡೆಯೋ ಪ್ರಕ್ರಿಯೇ ಇದು.
ತಪ್ಪದೇ ಎಲ್ಲಾ ಪೋಷಕರು ಈ ವೇದಿಕೆಯನ್ನು ಬಳಸಿಕೊಳ್ಳಿ
ನಮ್ಮ ಕಲೆ ಸಾಹಿತ್ಯ ಸಂಸ್ಕೃತಿಯಲ್ಲಿ ಪಾಲ್ಗೊಳ್ಳಿ ಎಂದು ಸುಚೇಂದ್ರ ಪ್ರಸಾದ್ ಕರೆ ನೀಡಿದರು.

ಈ ವೇಳೆ ಚಿತ್ರಭೂಮಿ ಇತ್ಯಾದಿ..ವೇದಿಕೆಯ ಸಂಸ್ಥಾಪಕ ನಟ ಆದಿ ಲೋಕೇಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮಹರ್ಷಿ ಪಬ್ಲಿಕ್ ಶಾಲೆಯ ಸಿಇಒ ತೇಜಸ್ ಶಂಕರ್,ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಪ್ರಿಯಾಂಕ,ನಟ ಜೆ ಪಿ ಜಯಪ್ರಕಾಶ್ , ಚೇತನ್ ರಮೇಶ್ ,ರೇಖಾ ಶ್ರೀನಿವಾಸ್. ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಹಾನ್ ಶ್ರೇಯಸ್ ಮತ್ತಿತರರು ಭಾಗಿಯಾಗಿ ಶುಭ ಕೋರಿದರು.