ವಿದ್ಯುತ್ ಕಂಬ ಏರಿತಾಯಿಯ ಕಣ್ಣೆದುರೇ ಪ್ರಾ*ಬಿಟ್ಟ ಮಗ

Spread the love

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಮಾ.18: ಹೈ-ಟೆನ್ನನ್‌ ವಿದ್ಯುತ್ ಕಂಬ ಏರಿ ಯುವಕನೊಬ್ಬ ತನ್ನ ತಾಯಿಯ ಕಣ್ಣೆದುರೇ ಪ್ರಾಣಬಿಟ್ಟಿರುವ ಧಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಟಿ.ಸಿ.ಹುಂಡಿ ಗ್ರಾಮದ ಬಳಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಸಣಶೆಟ್ಟಿಯ ಮಗ ಮಸಣಶೆಟ್ಟಿ (27) ಮೃತ ದುರ್ದೈವಿ.

ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದ ಈತ ಮದ್ಯವ್ಯಸನಿಯಾಗಿದ್ದು ಮದುವೆ ಮಾಡಿಕೊಡುವಂತೆ ಮನೆಯಲ್ಲಿ ತಂದೆ ತಾಯಿಯನ್ನು ಪೀಡಿಸುತ್ತಿದ್ದ.

ಇದಕ್ಕೆ ಮನೆಯವರು ನೀನು ಕುಡಿತಬಿಡು ಮದುವೆ ಮಾಡುತ್ತೇವೆ ಎಂದು ಹೇಳುತ್ತಿದ್ದರು ಇದೇ ವಿಚಾರಕ್ಕೆ ಮೃತ ಮಸಣಶೆಟ್ಟಿ ಆಗಾಗ ಮನೆಯಲ್ಲಿ ಕ್ಯಾತೆ ತೆಗೆದು ಗಲಾಟೆ ಮಾಡುತ್ತಿದ್ದ.

ಕಳೆದ ಮೂರು ದಿನಗಳಿಂದ ಮತ್ತೆ ಕ್ಯಾತೆ ತೆಗೆದು ಮನೆಯಲ್ಲಿ ಜೋರು ಗಲಾಟೆ ಮಾಡಿದ್ದ.

ಇಂದು ಬೆಳಗ್ಗೆ ಮನೆಯಿಂದ ಬಂದು ಮಸಣಶೆಟ್ಟಿ ಲಿಂಗನಪುರ ಬಳಿ ಜಮೀನಿನಲ್ಲಿ ಹಾಯ್ದು ಹೋಗಿರುವ ಹೈಟೆನ್ಷನ್ ವಿದ್ಯುತ್ ಕಂಬದ ಏರಿದ್ದ.

ಇದನ್ನು ಕಂಡು ಗಾಬರಿಗೊಂಡ ಜಮೀನಿನ ಮಾಲೀಕ ಸಂಬಂಧ ಪಟ್ಟ ಇಲಾಖೆಗೆಪಕ ಮಾಹಿತಿ ನೀಡಿದ್ದಾನೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಹಾಗೂ ಚೆಸ್ಕಾಂ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಹೈ ಟೆನ್ಷನ್ ಕಂಬ ಏರಿ ಕುಳಿತಿದ್ದ ಮಸಣಶೆಟ್ಟಿಯನ್ನು ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಈ ವೇಳೆ ತನ್ನ ತಾಯಿಯನ್ನು ಕರೆಸುವಂತೆ ಕೇಳಿಕೊಂಡಿದ್ದಾನೆ. ಸ್ಥಳಕ್ಕೆ ತಾಯಿ ಸಿದ್ದರಾಜಮ್ಮ ಬಂದ ಕೂಡಲೇ ಯಾರ ಮನವೊಲಿಕೆಗೂ ಜಗ್ಗದೆ ಆಕೆಯ ಕಣ್ಣೆದುರೇ ವಿದ್ಯುತ್ ಲೈನ್ ಹಿಡಿದಿದ್ದಾನೆ, ಕ್ಷಣಮಾತ್ರದಲ್ಲಿ ಆತ ಮೃತಪಟ್ಟಿದ್ದಾನೆ.

ಆ ಸಂದರ್ಭದಲ್ಲಿ ಹೈ-ಟೆನ್ಷನ್ ತಂತಿಯಲ್ಲಿ ವಿದ್ಯುತ್ ಪ್ರಸರಣವನ್ನು ಸ್ಥಗಿತಗೊಳಿಸಲಾಗಿತ್ತು,ಆದರೂ ಇಂಡೆಕ್ಸ್ ನಲ್ಲಿ ಶೇಖರಣೆಯಾಗಿದ್ದ ವಿದ್ಯುತ್ ಶಾಖಕ್ಕೆ ಮಸಣಶೆಟ್ಟಿ ಪ್ರಾಣ ಹೋಗಿದೆ.

ಘಟನೆಯ ನಂತರ ಮೃತದೇಹವನ್ನು ಹೈಟೆನ್ಶನ್ ಕಂಬದಿಂದ ಇಳಿಸಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆಯ ನಂತರ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.