ಶಾಸಕ ಮುನಿರತ್ನ ವಿರುದ್ಧ ಬಹಳಷ್ಟು ಗಂಭೀರ ಪ್ರಕರಣಗಳಿವೆ:ಸಿಎಂ

Spread the love

ಮೈಸೂರು: ಶಾಸಕ ಮುನಿರತ್ನ ವಿರುದ್ಧ ಬಹಳಷ್ಟು ಗಂಭೀರ ಪ್ರಕರಣಗಳಿವೆ,
ಎಸ್ಐಟಿ ತನಿಖೆ ಮಾಡುವಂತೆ ಸಚಿವರು ಹಾಗೂ ಶಾಸಕರು ಪತ್ರ ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,
ಸಚಿವರು ಹಾಗೂ ಶಾಸಕರು ಕೊಟ್ಟಿರುವ
ಪತ್ರದ ಮೇಲೆ ಮುಂದಿನ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಮುನಿರತ್ನ ವಿರುದ್ದ ಬಹಳಷ್ಟು ಗಂಭೀರ ಪ್ರಕರಣಗಳಿವೆ,ಹಾಗಾಗಿ ವಿಶೇಷ ತನಿಖಾ ತಂಡದ ಅಗತ್ಯ ಇದೆ ಎಂದು ಸಚಿವರು ಕೆಲ ಶಾಸಕರು ಕೇಳಿದ್ದಾರೆ,ಈ ಬಗ್ಗೆ ಗೃಹ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಗಣೇಶ ಮೂರ್ತಿ ಗಲಾಟೆಗಳು
ಪ್ರತಿ‌ನಿತ್ಯ ನಡೆದಿಲ್ಲ,
ಇದುವರೆಗೆ ಎರಡು ಪ್ರಕರಣ ನಡೆದಿವೆ,
ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲಾ ಕಡೆ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲು ತಿಳಿಸಿದ್ದೇನೆ,ಇನ್ನು
ನಾಗಮಂಗಲ ಪ್ರಕರಣದಲ್ಲಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ ಎಂದು ಮುಖ್ಯ ಮಂತ್ರಿ ಸಮರ್ಥಿಸಿಕೊಂಡರು.

ಎಚ್.ಡಿ ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,
ದಾಖಲೆಗಳನ್ನ ಸಚಿವರು ಬಿಡುಗಡೆ ಮಾಡಿದ್ದಾರೆ,ಆದರೆ ನಾನು ಆ ದಾಖಲೆಗಳನ್ನ ನೋಡಿಲ್ಲ,ನೋಡುತ್ತೇನೆ,ಆ ಭೂಮಿಯನ್ನ
ಕುಮಾರಸ್ವಾಮಿ ಅವರ ಭಾಮೈದನಿಗೆ ರಿಜಿಸ್ಟರ್ ಆಗಿದೆ,ಅತ್ತೆಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದು ಬಹಳ ಗಂಭೀರವಾದ ಪ್ರಕರಣ,
ನೋಡೊಣಾ ಆ ಫೈಲನ್ನ ತರಿಸಿ ಪರಿಶೀಲನೆ ಮಾಡುತ್ತೇನೆ ಎಂದ ಸಿದ್ದು,
ಕುಮಾರಸ್ವಾಮಿಯವರದು ಯಾವಗಲೂ ಹಿಟ್ ಅಂಡ್ ರನ್ ಕೇಸ್.
ತಮ್ಮ ಮೇಲಿನ ಎಲ್ಲಾ ಆರೋಪಕ್ಕೂ ಕೂಡ ಹಿಟ್ ಅಂಡ್ ರನ್ ರೀತಿ ಮಾತನಾಡಿ ಹೋಗುತ್ತಾರೆ ಎಂದು ಹೇಳಿದರು.