ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025-30 ನೇ ಸಾಲಿಗೆ ಚುನಾವಣೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಯಿತು.
ಮೈಸೂರು ಜಿಲ್ಲಾ ಪ್ರತಿನಿಧಿ ಎರಡು ಸ್ಥಾನಕ್ಕೆ ಚುನಾವಣೆಯು ಕೃಷ್ಣಮೂರ್ತಿಪುರಂನ ಭಗಿನಿ ಸೇವಾ ಸಮಾಜದಲ್ಲಿ ನಡೆಯಿತು.
ಮೈಸೂರು ಜಿಲ್ಲೆಯಿಂದ 4069 ಮತಗಳ ಪೈಕಿ 1831ಮತಗಳು ಚಲಾವಣೆಯಾದವು.
ಅಭ್ಯರ್ಥಿಗಳು ಕುತೂಹಲದಿಂದ ಫಲಿತಾಂಶವನ್ನು ನೋಡುತ್ತಿದ್ದು ಕಂಡುಬಂದಿತು.

7ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು, ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ.ಲಕ್ಷಿದೇವಿ ಅವರು 808ಮತಗಳನ್ನ ಹಾಗೂ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಅವರು 635ಮತಗಳನ್ನು ಪಡೆದು ಇಬ್ಬರು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಆಯ್ಕೆಯಾದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳಾದ ಭಾನುಪ್ರಕಾಶ್ ಶರ್ಮ ಮತ್ತು ರಘುನಾಥ್ ರವರು ಕಣದಲ್ಲಿದ್ದರು.
ರಘುನಾಥ್ ಬಣದಿಂದ ಡಾ. ಲಕ್ಷ್ಮಿದೇವಿ ಮತ್ತು ಡಾ.ಭಾನುಪ್ರಕಾಶ್ ಶರ್ಮ ಅವರ ಬಣದಿಂದ ಡಿ.ಟಿ. ಪ್ರಕಾಶ್ ಆಯ್ಕೆಯಾದರು.
ಈ ವೇಳೆ ಗೆದ್ದ ಅಭ್ಯರ್ಥಿಗಳನ್ನು ಮೈಸೂರು ಬ್ರಾಹ್ಮಣ ಸಮುದಾಯದ ಮುಖಂಡರು ಅಭಿನಂದಿಸಿ ಸಂಭ್ರಮಿಸಿದರು.

ಈ ಸಂಧರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಂ.ಶ್ರೀಕಂಠ ಕುಮಾರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ್, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್. ಎನ್ ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹೇಮಲತ,ಪ್ರಶಾಂತ್ ತಾತಾಚಾರ್ ಕಣ್ಣನ್, ಮುಳ್ಳೂರು ಸುರೇಶ್, ವಿಜಯಕುಮಾರ್, ವಿನಯ್ ಕಣಗಾಲ್, ನಾಗೇಂದ್ರಬಾಬು, ಸುಚೀಂದ್ರ, ಶ್ರೀನಿವಾಸಪ್ರಸಾದ್, ಅರುಣ್, ಶ್ರೀಕಾಂತ್ ಕಶ್ಯಪ್, ಮಿರ್ಲೆ ಪಣೀಶ್, ಎನ್.ಕೆ ಸುಂದರ್, ಅರವಿಂದ,ರಂಗನಾಥ್ ಮತ್ತಿತರರು ಹಾಜರಿದ್ದು ಗೆದ್ದವರಿಗೆ ಅಭಿನಂದಿಸಿದರು.