ಮೈಸೂರು: ನಾಡಿನ ಸಮಗ್ರ ದಾಸಸಾಹಿತ್ಯ ರಚನೆಯಲ್ಲಿ ಪುರಂದರ ದಾಸರು ಅಗ್ರಗಣ್ಯರು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು.
ಪುರಂದರ ದಾಸರು ರಚಿಸಿದ ಪ್ರತಿಯೊಂದು ಹಾಡುಗಳು ನಮ್ಮ ಜೀವನವನ್ನು ಬದಲಿಸಬಲ್ಲದು ಎಂದು ಅವರು ತಿಳಿಸಿದರು.
ಪುರಂದರ ದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ
ನಗರದ ಯಾದವಗಿರಿ ಯಲ್ಲಿರುವ ಶ್ರೀ ಉತ್ತರಾದಿ ಮಠ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಂದರ ದಾಸರ ಜೀವನ ಚರಿತ್ರೆ ಕುರಿತು ವಿಕ್ರಂ ಅಯ್ಯಂಗಾರ್ ಮಾತನಾಡಿದರು.
15ನೇ ಶತಮಾನದಲ್ಲಿ ಜನಸಿಸಿದ ಪುರಂದರ ದಾಸರು ಸಾಕ್ಷಾತ್ ನಾರದ ಮಹರ್ಷಿಗಳ ಅವತಾರವೆಂದು ಪುರಾಣಗಳು ತಿಳಿಸತ್ತವೆ, ಪುರಂದರ ದಾಸರು ತಮ್ಮ ಜೀವಿತಾವಧಿಯವರೆಗೂ ನಾಡಿನ ಪ್ರತಿಯೊಂದು ಊರುಗಳಿಗೆ ಸಂಚರಿಸಿ ಸಮಾಜವನ್ನು ಉದ್ಧಾರ ಮಾಡಿದ ಮಹಾನ್ ಸಮಾಜ ಸುಧಾರಕ ಎಂದು ಬಣ್ಣಿಸಿದರು.
ಸುಮಾರು 4 ಲಕ್ಷ 7 ಸಾವಿರ ಕೀರ್ತನೆಗಳನ್ನು ರಚಿಸಿದ ಕೀರ್ತಿ ಪುರಂದರ ದಾಸರಿಗೆ ಸಲ್ಲುತ್ತದೆ ಎಂದು ವಿಕ್ರಂ ಅಯ್ಯಂಗಾರ್ ಹೇಳಿದರು.
ಕಾರ್ಯಕ್ರಮದಲ್ಲಿ ರಾಮಾನುಜ ಅಬ್ಯುದಯ ಸಹಕಾರ ಸಂಘದ ಅಧ್ಯಕ್ಷ ಎಚ್ ಕೆ ರಾಜಗೋಪಾಲ್,
ಎಸ್ ಬಿ ವಾಸುದೇವಮೂರ್ತಿ, ಪ್ರಮೋದ್ ಆಚಾರ್, ನಾಗಭೂಷಣ್ ಆಚಾರ್, ಅನಂತ ಕೃಷ್ಣ,ಹೊಯ್ಸಳ ಕರ್ನಾಟಕ ನಿರ್ದೇಶಕರಾದ ರಂಗನಾಥ್, ಸುಚೇಂದ್ರ, ಶ್ರೀನಿವಾಸ್, ಮತ್ತಿತರರು ಪಾಲ್ಗೊಂಡಿದ್ದರು.