ಪ್ರಯಾಗ್ರಾಜ್ ನಿಂದ ಬರುವಾಗ ಅಪಘಾತ: ಮೈಸೂರಿನ ಇಬ್ಬರ ದುರ್ಮರಣ

Spread the love

ಮೈಸೂರು: ಪ್ರಯಾಗರಾಜ್‌ ಯಾತ್ರೆ ಮುಗಿಸಿ ಕಾಶಿಗೆ ಬರುವಾಗ ಮಿರ್ಜಾಪುರ ಬಳಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಇಬ್ಬರು ಯುವಕರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ರಾಮಕೃಷ್ಣ ಶರ್ಮ ಹಾಗೂ ಅರುಣ್ ಶಾಸ್ತ್ರಿ ಅವರು ಮೃತಪಟ್ಟ ದುರ್ದೈವಿಗಳು.

ರಾಮಕೃಷ್ಣ ಶರ್ಮಾ ಅವರು ಕೆ ಆರ್ ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು, ಅವರಿಗೆ ೩೧ ವರ್ಷ. ಮದುವೆ ಆಗಿರಲಿಲ್ಲ. ತಂದೆ – ತಾಯಿಗೆ ಅವರು ಒಬ್ಬರೇ ಮಗ.

ಮಿರ್ಜಾಪುರ ಸಮೀಪ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು,ಚಿಕಿತ್ಸೆ ಫಲಿಸದೆ ನಿನ್ನೆ ಬೆಳಿಗ್ಗೆ ಅವರು ಕೊನೆಯುಸಿರೆಳೆದರು.

ಮತ್ತೊಬ್ಬರು ಅರುಣ್ ಶಾಸ್ತ್ರಿ.ಅವರಿಗೆ 38 ವರ್ಷ,ಅವರು ಪರೋಹಿತರಾಗಿ ಕೆಲಸ ನಿರ್ವಹಿಸುತ್ತಿದ್ದರು, ವಿವಾಹವಾಗಿರಲಿಲ್ಲ.

ಮಿರ್ಜಾಪುರದ ಹತ್ತಿರ ಅಪಘಾತವಾಗಿ ಅರುಣ್ ಶಾಸ್ತ್ರಿ ಅವರ ತಲೆಗೂ ತೀವ್ರವಾದ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಅವರು ಮೃತಪಟ್ಟಿದ್ದಾರೆ.