ಹಸುಗೂಸನ್ನ ಪಾಳುಬಾವಿಗೆ ಎಸೆದ ನೀಚೆ

ಮೈಸೂರು: ನಿರ್ದಯಿ ಮಹಾತಾಯಿ ಮೈಸೂರು ತಾಲೂಕು ಸಾಹುಕಾರಹುಂಡಿ ಗ್ರಾಮದ ಪಾಳುಬಾವಿಯಲ್ಲಿ ನವಜಾತ ಗಂಡು ಶಿಶು ಬಿಸಾಡಿ ಹೋಗಿರುವ ಹೇಯ ಘಟನೆ ನಡೆದಿದೆ.

ಮಾಹಿತಿ ಅರಿತ ಅಂಗನವಾಡಿ ಕಾರ್ಯಕರ್ತೆ ರುಕ್ಮಿಣಿ ಅವರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮಗುವನ್ನ ಬಾವಿಯಿಂದ ಹೊರಗೆ ತೆಗೆದು ರಕ್ಷಿಸಲು ಪ್ರಯತ್ನಿಸಿದ್ದಾರೆ.

ಆದರೆ ದುರದೃಷ್ಟವಶಾತ್ ಮಗುವನ್ನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲು ತೆರಳುವಾಗ‌ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ.

ಏನೂ ಅರಿಯದ ಕಂದ ಕಣ್ಣು ಬಿಡುವ ಮುನ್ನ ಇಹಲೋಕ ತ್ಯಜಿಸಿದೆ.
ಇಲವಾಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಸಿ,ಮುಂದಿನ ಕ್ರಮ ಕೈಗೊಂಡಿದ್ದಾರೆ.