ನಂಜನಗೂಡು: ಒಂದು ದೇಶ ಸರ್ವತೋಮುಖ ಅಭಿವೃದ್ಧಿ ಸಾದಿಸಲು ಆ ದೇಶದ ಗಣತಂತ್ರ ವ್ಯವಸ್ಥೆ ಮತ್ತು ಸಂವಿಧಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ರಾಮಪ್ರಸಾದ್ ಹೇಳಿದರು.
ಇಂದು ಕಾಲೇಜಿನಲ್ಲಿ ೭೬ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಒಬ್ಬ ವಿದ್ಯಾರ್ಥಿ ಗಣರಾಜ್ಯೋತ್ಸವದ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಪನ್ಯಾಸಕರು ಶ್ರಮವಹಿಸಬೇಕೆಂದು ತಿಳಿಸಿದರು.
ಸಮಾಜಶಾಸ್ತ್ರ ಉಪನ್ಯಾಸಕ ಡಾ. ಬಿ ಜೆ.ಗೋಪಾಲಕೃಷ್ಣ ಅವರು ಮಾತನಾಡಿ, ಗಣತಂತ್ರ ವ್ಯವಸ್ಥೆಯ ಇತಿಹಾಸ, ಮಹತ್ವದ ಮಾಹಿತಿಯನ್ನು ನೀಡಿದರು. ಸಂವಿಧಾನವನ್ನು ಯಾವ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿಕೊಟ್ಟರು.
ಭೌತಶಾಸ್ತ್ರ ಉಪನ್ಯಾಸಕ ಎಚ್.ಎಸ್ ರಾಮಾನುಜ ಅವರು ಮಾತನಾಡಿ ಭಾರತ ರಾಷ್ಟ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗಣತಂತ್ರ ವ್ಯವಸ್ಥೆಯಿಂದ ಮುಂದೆ ಸಾವಿರಾರು ವರ್ಷಗಳ ಕಾಲ ಈ ದೇಶ ಸುಭದ್ರವಾಗಿ ಇರುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ಮತ್ತು ಸಂವಿಧಾನ ಇವೆರಡು ಒಂದು ರಾಷ್ಟ್ರದ ಬಲಿಷ್ಠ ಆಯುಧಗಳು. ಹಾಗಾಗಿ ಇವೆರಡನ್ನೂ ನಾವು ಬಹಳ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಸ್ವತಂತ್ರವನ್ನು ಗಾಂಧೀಜಿಯವರು ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿದ ಮಹತ್ವಪೂರ್ಣವಾದ ಕೊಡುಗೆಗಳು,ಹಾಗಾಗಿ ಇಂದು ಪ್ರಪಂಚದ ಬೇರೆ ದೇಶಗಳು ಭಾರತದ ಕಡೆ ನೋಡಬೇಕಾದರೆ ನಮ್ಮ ದೇಶದ ಬಲಿಷ್ಠ ಸಂವಿದಾನವೇ ಕಾರಣ ಎಂದು ಹೇಳಿದರು .
ಕಾರ್ಯಕ್ರಮದ ನಿರೂಪಣೆಯನ್ನು ಡಾ. ಎ.ಸುಮಾ ,ಸಾಗತ ಎನ್. ದಿನೇಶ್ ,ವಂದನೆಯನ್ನು ರಂಗಸ್ವಾಮಿಯವರು ಮಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ, ಲಿಂಗಣ್ಣಸ್ವಾಮಿ, ಸ್ವಾಮಿಗೌಡ ,ಎಚ್ ಕೆ ಪ್ರಕಾಶ್ , ಆದಿಲ್ ಹುಸೇನ್, ನಾಗರಾಜ ರೆಡ್ಡಿ, ಡಾ. ಟಿ.ಕೆ ರವಿ ಎನ್.ನಾಗರಾಜ್,ಡಾ. ಕೆ. ಮಾಲತಿ ,ಸುಮಿತ್ರ, ನಾಗರಾಜ ರೆಡ್ಡಿ ,ಕೆ.ಎಸ್.ಹರೀಶ್ ,ರೂಪ ,ವತ್ಸಲ, ಮೀನಾ,ಪದ್ಮಾವತಿ ಎಂ.ಬಿ ,ವಸಂತಕುಮಾರಿ ,ಶೃತಿ ,ಸುಲಕ್ಷಣ, ಹರೀಶ್ ಎನ್.ಎಮ್, ಮಿಲ್ಟನ್ ,ನಿಂಗಯ್ಯ,ಮಹದೇವ ಸ್ವಾಮಿ,ನಾಗಮ್ಮ ಉಪಸ್ಥಿತರಿದ್ದರು.