ಹೆಣ್ಣು ಮಗುವಿನ ಬಗ್ಗೆ ಹೆಮ್ಮೆಯ ಭಾವ ಇರಲಿ:ಡಾ.ಮಂಜುನಾಥ್

ಮೈಸೂರು: ಹೆಣ್ಣು ಎಂದರೆ ಬೇರೆ ಮನೆಯ ವಸ್ತು ಎಂಬ ಭಾವನೆಯಿಂದ ಹೊರಬಂದು ಅವರ ಬಗ್ಗೆ ಹೆಮ್ಮೆಯ ಭಾವ ಇರಬೇಕು ಎಂದು ಕಾಂಗರೂ ಆಸ್ಪತ್ರೆಯ ವೈಧ್ಯಕೀಯ ನಿರ್ದೆಶಕರು ಡಾ. ಮಂಜುನಾಥ್ ಹೇಳಿದರು.

ಕಾಳಿದಾಸ ರಸ್ತೆಯಲ್ಲಿರುವ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಕಾಂಗರೂ ಫರ್ಟಿಲಿಟಿ ಸೆಂಟರ್
ವತಿಯಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ಉಡುಗೊರೆ ಯನ್ನು ನೀಡಿ ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಹೆಣ್ಣಿನ ಸಂಖ್ಯೆ ಕಡಿಮೆ ಆಗುತ್ತಿದೆ, ಇದರಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಹೆಣ್ಣು ಭ್ರೂಣ ಹತ್ಯೆಯಂತಹ ಕಾರ್ಯಕ್ಕೆ ಕೈ ಹಾಕಬಾರದು, ಅದು ಕಾನೂನು ರೀತಿ ಅಪರಾಧವಾಗಿದೆ, ಸ್ತ್ರೀ ಪುರುಷರ ಅನುಪಾತ ಸಮನಾಗಿರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ.ಮಂಜುನಾಥ್ ತಿಳಿಹೇಳಿದರು.

ಕಾಂಗರೂ ಆಸ್ಪತ್ರೆಯ ತಜ್ಞ ವೈದ್ಯರುಗಳಾದ
ಡಾ.ವೀಣಾ ಕೀರ್ತಿ, ಡಾ.ಶೃತಿ ಪುರುಷೋತ್ತಮ,ಡಾ.ಲೀಲಾವತಿ ಹಾಗೂ ಸಿಬ್ಬಂದಿ ಗಳಾದ ಡಾ.ಅಥಿತಿ, ಶೋಭರಾಣಿ,
ಅಕ್ಷತ, ನಿವೇದಿತಾ, ಫರೀನ್ ಹಾಗೂ ಮಂಜುನಾಥ್ ಮತ್ತಿತ್ತರು ಹಾಜರಿದ್ದರು.