ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ರಾಸುಗಳ ರಕ್ಷಿಸಿದ ಪೊಲೀಸರು

Spread the love

ಮೈಸೂರು: ಬೊಲೆರೋ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 13 ರಾಸುಗಳನ್ನ ಪೊಲೀಸರು ರಕ್ಷಿಸಿದ್ದಾರೆ.

ಈ ವೇಳೆ ಆರೋಪಿಗಳು ಪರಾರಿಯಾಗಿದ್ದು,ಪೊಲೀಸರು
ಪಿಕಪ್ ವಾಹನವನ್ನ ವಶಪಡಿಸಿಕೊಂಡಿದ್ದಾರೆ.

ಬೋಗಾದಿ ರಿಂಗ್ ರಸ್ತೆ ಜಂಕ್ಷನ್ ನಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಧನರಾಜ್ ಅವರು ಗರುಡಾ ವಾಹನದ ಗಸ್ತಿನಲ್ಲಿದ್ದಾಗ ಗದ್ದಿಗೆ ಮಾರ್ಗವಾಗಿ ಮೈಸೂರಿನತ್ತ ಬೊಲೆರೋ ಪಿಕಪ್ ವಾಹನ ಬಂದಿದೆ.

ಆಗ ವಾಹನವನ್ನ ನಿಲ್ಲಿಸಿ ಪರಿಶೀಲಿಸಿದಾಗ ಕಿರಿದಾದ ಜಾಗದಲ್ಲಿ 13 ರಾಸುಗಳನ್ನ ಅಮಾನವೀಯವಾಗಿ ಹಿಂಸೆಯಾಗುವಂತೆ ತುಂಬಿರುವುದು ಗೊತ್ತಾಗಿದೆ.ಗರುಡಾ ವಾಹನ ಕಂಡ ಕೂಡಲೇ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದಾರೆ.

ರಾಸುಗಳನ್ನ ರಕ್ಷಿಸಿದ ಧನರಾಜ್ ಅವರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,ರಾಸುಗಳನ್ನ ಪಿಂಜರಾಪೋಲ್ ಗೆ ಸಾಗಿಸಲಾಗಿದೆ.