ಮೈಸೂರು: ಲಯನ್ಸ್ ಬ್ಲಡ್ ಸೆಂಟರ್, ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಕ್ತದಾನಿಗಳ ಅನುಕೂಲಕ್ಕಾಗಿ ಸಂಚಾರಿ ರಕ್ತದಾನ ಹಾಗೂ ಸಂಗ್ರಹಣಾ ವಾಹನ ಬಿಡುಗಡೆ ಮಾಡಲಾಗಿದೆ.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಸಂಚಾರಿ ರಕ್ತದಾನ ಹಾಗೂ ಸಂಗ್ರಹಣ ವಾಹನವನ್ನು ಶಾಸಕ ಕೆ ಹರೀಶ್ ಗೌಡ ಅವರು ಲೋಕಾರ್ಪಣೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ರಕ್ತದಾನ ಮಾಡಿದರೆ ವೀಕ್ ಆಗುತ್ತಾರೆ, ರಕ್ತ ಬರುವುದಿಲ್ಲ, ರಕ್ತ ತೆಗೆದುಕೊಳ್ಳುವ ಸಂದರ್ಭದಲ್ಲಿ ಪಿನ್ ಚುಚ್ಚುತ್ತಾರೆ, ರಕ್ತದಾನ ಮಾಡುವುದಕ್ಕೆ ಒಂದು ದಿನ ಸಂಪೂರ್ಣ ಸಮಯ ಬೇಕು ಎಂಬುದು ಸೇರಿದಂತೆ ವಿವಿಧ ತಪ್ಪುಕಲ್ಪನೆಗಳಿವೆ,ಹಾಗಾಗಿ ಜನ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.
ಈ ತಪ್ಪು ಕಲ್ಪನೆಗಳನ್ನು ಹೊಗಲಾಡಿಸಿದರೆ ಶೇ.100ರಷ್ಟು ರಕ್ತ ಪೂರೈಕೆ ಮಾಡಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚು ಜನ ರಕ್ತದಾನ ಮಾಡುವಂತೆ ಅದರಲ್ಲೂ ವಿಶೇಷವಾಗಿ ಯುವಕರು ರಕ್ತದಾನ ಮಾಡುವಂತೆ ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹರೀಶ್ಗೌಡ ಹೇಳಿದರು.
ಸಂಚಾರಿ ರಕ್ತದಾನ ಹಾಗೂ ಸಂಗ್ರಹಣ ವಾಹನ ಮೈಸೂರಿಗರಿಗೆ ಅವಶ್ಯಕತೆ ಇದೆ, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ,ಸಾರ್ವಜನಿಕರ ಅನುಕೂಲಕ್ಕಾಗಿ ರಕ್ತ ಸಂಗ್ರಹ ವಾಹನವನ್ನು ಲೋಕಾರ್ಪಣೆ ಗೊಳಿಸಿದ್ದೇವೆ, ಯಾರಾದರೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಾಡ ಬಯಸುವವರು ಮೊಬೈಲ್ 98446 13407 ಸಂಪರ್ಕಿಸಬಹುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ಪ್ರಬಂಧ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ. ಜಯಂತ್,ಮುತ್ತಣ್ಣ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ ಜೆ ರಮೇಶ್,ಸವಿತಾ ಘಾಟ್ಕೆ, ದೇವೇಂದರ್ ಪರಿಹಾರ, ನವೀನ್, ಸಚಿನ್ ನಾಯಕ್, ಮಹಾನ್ ಶ್ರೇಯಸ್, ಸದಾಶಿವ್, ಸೂರಜ್ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಹಾಜರಿದ್ದರು.

