ಚನ್ನರಾಯಪಟ್ಟಣ : ಜೆಡಿಎಸ್ ನ ಹಿರಿಯ ಮುಖಂಡರೂ ದಳದ ನಿಷ್ಠಾವಂತ ಕಾರ್ಯಕರ್ತರಾದ ಪುಟ್ಟೇಗೌಡ ಅವರು ನಿಧನ ಹೊಂದಿದ್ದಾರೆ.
ಅಪಘಾತಕ್ಕೀಡಾಗಿ ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಅವರಿಗೆ 63 ವರ್ಷ ಗಳಾಗಿತ್ತು.ಪುಟ್ಟೇಗೌಡ ಅವರು ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ಚನ್ನೇ ನಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು.
ಅವರು ಇಬ್ಬರು ಪುತ್ರರು, ಪುತ್ರಿ, ಅಳಿಯ ಸೊಸೆಯಂದಿರು ಹಾಗೂ ಅಪಾರ ಬಂಧು ಬಾಂಧವರು, ಗ್ರಾಮಸ್ಥರನ್ನು ಅಗಲಿದ್ದಾರೆ.
ಜೆಡಿಎಸ್ ಮುಖಂಡ ಪುಟ್ಟೇಗೌಡರ ನಿಧನಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಪಾರ ಬಂಧು ಬಳಗ,ಗ್ರಾಮಸ್ಥರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಂಜೆ ಅವರ ಹುಟ್ಟೂರು ಚನ್ನೇನಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.