ಕೆಪಿಸಿಸಿ ವಿವಿಧ ವಿಭಾಗಕ್ಕೆ ರವೀಂದ್ರ ಎಂ, ರಾಕೇಶ್ ಗೌಡ ನೇಮಕ

ಮೈಸೂರು: ಕೆಪಿಸಿಸಿ ಕಾರ್ಮಿಕರ ವಿಭಾಗದ ರಾಜ್ಯ ಜಂಟಿ ಕಾರ್ಯದರ್ಶಿ ಸದಸ್ಯರಾಗಿ ಹಾಗೂ ಕೆಪಿಸಿಸಿ ಕಾರ್ಮಿಕರ ವಿಭಾಗದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ರವೀಂದ್ರ ಎಂ ಮತ್ತು ರಾಕೇಶ್ ಗೌಡ ಅವರನ್ನು ನೇಮಕ ಮಾಡಲಾಗಿದೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧನ ಕಾರ್ಯದರ್ಶಿ ಸಿ ನರೇಂದ್ರ ಅವರ ಶಿಫಾರಸಿನ ಮೇರೆಗೆ ರವೀಂದ್ರ ಎಂ ಮತ್ತು ರಾಕೇಶ್ ಗೌಡ ರವರನ್ನು ನೇಮಕ ಮಾಡಲಾಗಿದೆ

ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ ಅವರು ಈ ನೇಮಕಾತಿ ಪತ್ರ ವಿತರಿಸಿ ಶುಭ ಕೋರಿದರು.