ಮೈಸೂರು: ಇದೇ ಶನಿವಾರ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಲಿದ್ದು 9 ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ವಿವಿ ಕುಲಪತಿ ಪ್ರೊ ನಾಗೇಶ್ ವಿ ಬೆಟ್ಟಕೋಟೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕರ್ನಾಟಕ ರಾಜ್ಯ ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಜ.18ರಂದು ನಡೆಯಲಿದೆ ಎಂದು ಹೇಳಿದರು.
ವಿಶ್ವ ವಿದ್ಯಾಲಯ ಶೈಕ್ಷಣಿಕ ಚಟುವಟಿಕೆ ಪ್ರಾರಂಭ ಮಾಡಿ 15ವರ್ಷ ಆಗಿದೆ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ 70 ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
7,8,9ನೇ ವಾರ್ಷಿಕ ಘಟಿಕೋತ್ಸವದಲ್ಲಿನ ಪದಕ ವಿಜೇತರು, ಗೌರವ ಡಾಕ್ಟರೇಟ್, ಹಾಗೂ ಡಿ ಲಿಟ್ ಪದವಿ ಪ್ರದಾನ ಮಾಡಲಾಗುತ್ತಿದೆ. 27 ವಿದ್ಯಾರ್ಥಿಗಳಿಗೆ 69 ಚಿನ್ನದ ಪದಕ ನೀಡಲಾಗುತ್ತಿದೆ. 2021-22ನೇ ಸಾಲಿನಲ್ಲಿ ಸತ್ಯನಾರಾಯಣ ರಾಜು, ಸಿ ಚೆಲುವರಾಜು, ಗಿರಿಜಾ ಲೋಕೇಶ್, 2022-23ನೇ ಸಾಲಿನಲ್ಲಿ ಸಂಧ್ಯಾ ಪುರೆಚ್ಚ, ಎಂ ಆರ್ ಸತ್ಯನಾರಾಯಣ, ಸಾಧುಕೋಕಿಲ, 2023-24ನೇ ಸಾಲಿನಲ್ಲಿ ವೀಣಾ ಮೂರ್ತಿ ವಿಜಯ, ಪುಷ್ಪಾ ಶ್ರೀನಿವಾಸನ್, ಸಿ ಬಸವಲಿಂಗಯ್ಯ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ಮೂರು ವರ್ಷದಲ್ಲಿ ಒಂಭತ್ತು ಜನರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ನಾಗೇಶ್ ವಿ ಬೆಟ್ಟಕೋಟೆ ಮಾಹಿತಿ ನೀಡಿದರು.
