ಜೂಜಾಟ: 11 ಜನರ ಮೇಲೆ ಪ್ರಕರಣ

Spread the love

ಚಾಮರಾಜನಗರ : ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ಮೇಲೆ ಚಾ.ನಗರ ಗ್ರಾಮಾಂತರ ಠಾಣಾ ವಲಯದಲ್ಲಿ ದೂರು ದಾಖಲಿಸಿ ಪಣಕ್ಕಿಟ್ಟಿದ್ದ ಹಣ ವಶಪಡೆದಿದ್ದಾರೆ‌.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಾಲದಿಂದ ಬೇಡರಪುರಕ್ಕೆ ಹೋಗುವ ಸರ್ಕಾರಿ ಜಮೀನಿನಲ್ಲಿ ಅಂದರ್ ಬಾಹ‌ರ್ ಜೂಜಾಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಒಟ್ಟು 10.900 ರೂ ಹಣ ವಶಪಡಿಸಿಕೊಂಡು ಒಟ್ಟು 11 ಜನರ ಮೇಲೆ ಪ್ರಕರಣ ದಾಖಲಿಸಿಧ್ದಾರೆ‌.

ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೇಡರಪುರ ಗ್ರಾಮದ ಶಶಿಕುಮಾರ್, ಗಿರೀಶ್, ಶಿವರಾಜು, ಮಹೇಶ್,ಸಿದ್ದಶೆಟ್ಟಿ,ಶಿವರಾಜು,ಮಹೇಶ್,ಶಿವರಾಜು,ಮಂಜು ಬಸವಣ್ಣ,ಕೊಡಸೋಗೆ ಮಹೇಶ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಪಿಎಸ್ಐ ರಿಯಾನ್ ಬೇಗಂ,ಎಎಸ್ಐ ಚಂದ್ರಶೇಖರ್, ಸಿಬ್ಬಂದಿಗಳಾದ ರವಿಕುಮಾರ್,ವೆಂಕಟೇಶ್,ವಿಶ್ವನಾಥ, ಹರೀಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.