ಜ.18 ರಂದು ಮೈಸೂರು ವಿವಿ 105ನೇ ವಾರ್ಷಿಕ ಘಟಿಕೋತ್ಸವ

Spread the love

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 105ನೇ ವಾರ್ಷಿಕ ಘಟಿಕೋತ್ಸವ ಇದೇ ಜ.18ರಂದು ನಡೆಯಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ತಿಳಿಸಿದರು.

ಮೈಸೂರಿನ ಕ್ರಾಫರ್ಡ್ ಭವನದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಬಗ್ಗೆ ಮಾಹಿತಿ ನೀಡಿದರು.

105ನೇ ವಾರ್ಷಿಕ ಘಟಿಕೋತ್ಸವದಲ್ಲಿ ಒಟ್ಟು 31,689 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು ಈ ಪೈಕಿ 20022 ಮಹಿಳೆಯರು ಹಾಗೂ 11667 ಮಂದಿ ಪುರುಷರು ಇದ್ದಾರೆ ಎಂದು ಹೇಳಿದರು.

ವಿವಿಧ ವಿಷಯಗಳಲ್ಲಿ 304 ಅಭ್ಯರ್ಥಿಗಳಿಗೆ ಪಿಹೆಚ್ ಡಿ ಪದವಿ ಪ್ರದಾನ ಮಾಡಲಾಗುವುದು. ಅವರಲ್ಲಿ 140 ಮಂದಿ ಮಹಿಳೆಯರು ಹಾಗೂ 164 ಮಂದಿ ಪುರುಷರಿದ್ದಾರೆ ಎಂದು ಹೇಳಿದರು ‌

ಒಟ್ಟು 413 ಪದಕಗಳು ಮತ್ತು 208 ಬಹುಮಾನಗಳನ್ನು 216 ಅಭ್ಯರ್ಥಿಗಳು ಪಡೆದುಕೊಂಡಿರುತ್ತಾರೆ. ಅವರಲ್ಲಿ 139 ಮಂದಿ ಮಹಿಳೆಯರಿದ್ದಾರೆ ಎಂದು ಕುಲಪತಿಗಳು ತಿಳಿಸಿದರು.

6,300 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ಅವರಲ್ಲಿ 4೦74 ಮಂದಿ ಮಹಿಳೆಯರಿದ್ದಾರೆ ಎಂದು

25೦85 ಅಭ್ಯರ್ಥಿಗಳಿಗೆ ಸ್ನಾತಕ ಪದವಿಯನ್ನು ಪ್ರದಾನ ಮಾಡಲಾಗುವುದು. ಈ ಪೈಕಿ 15808 ಮಹಿಳೆಯರಿದ್ದಾರೆ ಎಂದು ಕುಲಪತಿಗಳು ತಿಳಿಸಿದರು.

ಒಟ್ಟು ಪದಕ/ಬಹುಮಾನಗಳ ವಿಜೇತರು 69 ಮಂದಿ. ಈ ಪೈಕಿ 47 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದು ಕುಲಪತಿ ಲೋಕನಾಥ್ ಅವರು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಜ.18ರಂದು ಬೆಳಿಗ್ಗೆ 11 ಗಂಟೆಗೆ 105ನೇ ವಾರ್ಷಿಕ ಘಟಕೋತ್ಸವ ಸಮಾರಂಭ ನಡೆಯಲಿದೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಿತ ಜೈವಿಕ ತಂತ್ರಜ್ಞಾನ ಸಂಶೋಧನಾ ಪ್ರಾಧ್ಯಾಪಕ ಡಾ. ಟಿ. ಪಿ. ಸಿಂಗ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್
ಉಪಸ್ಥಿತರಿರುವರು ಎಂದು ಕುಲಪತಿಗಳು ತಿಳಿಸಿದರು.

ಈ ಬಾರಿಯ ಘಟಿಕೋತ್ಸವದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಸಂಸದ ಡಾ. ಎ.ಸಿ. ಷಣ್ಮುಗಂ, ಉಪಾಧ್ಯಕ್ಷರು ಮತ್ತು ಮುಖ್ಯ ಸಾರಿಗೆ ಮತ್ತು ಸಂಚಾರ ಇಂಜಿನಿಯರ್ ಡಾ. ಬಾಬು ಕೆ. ವೀರೇಗೌಡ,ಗ್ಲೋಬಲ್ ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಶಾಹೀನ್ ಮಜೀದ್ ಹಾಗೂ ರಾಜ್ಯಸಭಾ ಸದಸ್ಯರು ಮತ್ತು ಇನ್ಫೋಸಿಸ್ ಪ್ರತಿಷ್ಠಾನ ಸಂಸ್ಥಾಪಕರಾದ ಡಾ. ಸುಧಾ ಮೂರ್ತಿ ಅವರುಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ಎನ್. ಕೆ. ಲೋಕನಾಥ್ ಹೇಳಿದರು.