ಮೈಸೂರು: ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಇರುವ ಬಗ್ಗೆ ಯಾವುದೇ ಪ್ರತ್ಯಕ್ಷ ಅಥವಾ ಪರೋಕ್ಷ ಕುರುಹುಗಳು ಕಂಡು ಬಾರದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ಬಿ ಬಸವರಾಜ್ ಹೇಳಿದ್ದಾರೆ.
ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್ ನಲ್ಲಿ ನಿರಂತರ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ 10 ದಿನಗಳಿಂದ ಇಲ್ಲಿಯವರೆಗೂ ಕ್ಯಾಮೆರಾ ಟ್ರ್ಯಾಪ್ಗಳಲ್ಲಿ ಆಗಲಿ, ಡ್ರೋನ್ ಕ್ಯಾಮೆರಾ, ಕ್ಯಾಂಪಸ್ ನಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಆಗಲಿ ,ಕೊಂಬಿಂಗ್ ಕಮ್ ಸರ್ಚ್ ನಲ್ಲಿಯಾಗಲಿ, ಯಾವುದೇ ಚಲನವಲನಗಳು, ಹೆಜ್ಜೆ ಗುರುತು ಅಥವಾ ಯಾವುದೇ ರೀತಿಯ ಚಿರತೆ ಇರುವಿಕೆಯ ಕುರುಹುಗಳು ಕಂಡು ಬಂದಿದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.