ಸಾಯಿಸಿರಿ ವೃದ್ಧಾಶ್ರಮದ ಹಿರಿಯ ನಾಗರಿಕರ ಜೊತೆ ಸಂಕ್ರಾಂತಿ ಆಚರಣೆ

Spread the love

ಮೈಸೂರು: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದವರು ಹಿರಿಯ ನಾಗರೀಕರೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

ಮೈಸೂರಿನ ಜೆ.ಪಿ. ನಗರ, ಜೋಡಿ ರಸ್ತೆಯಲ್ಲಿರುವ ಸಾಯಿಸಿರಿ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಹೊಸ ಸೀರೆ, ಹಣ್ಣು ಹಂಪಲು ಹಾಗೂ ಎಳ್ಳು ಬೆಲ್ಲವನ್ನು ವಿತರಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ನಮ್ಮ ದೇಶದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಗಳಿಗೂ ತನ್ನದೇ ಆದ ಮಹತ್ವವಿದೆ ಎಂದು ಹೇಳಿದರು.

ರೈತಾಪಿ ಜನರು ಪ್ರತಿವರ್ಷ ಆಚರಿಸುವ ಹಬ್ಬಗಳಲ್ಲಿ ಸಂಕ್ರಾಂತಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ರೈತರು ಸುಗ್ಗಿ ಹಬ್ಬವಾಗಿ ಈ ಹಬ್ಬವನ್ನು ಆಚರಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ: ಬಿ. ಎಸ್. ಪ್ರೇಮ ಕುಮಾರಿ, ಸುಬ್ರಮಣಿ, ಛಾಯಾ, ಯಶವಂತ್ ಕುಮಾರ್,ವೀರಭದ್ರ ಸ್ವಾಮಿ, ಮಹದೇವ್, ಮಹೇಶ್, ರಾಜೇಶ್ ಕುಮಾರ್, ನವನೀತ್ ಕುಮಾರ್,ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್, ಹರ್ಷಿತ್ ಎಸ್, ನಾಗೇಶ್ ಮತ್ತಿತರರು ಹಾಜರಿದ್ದರು.