ಸ್ವಾಮಿ ವಿವೇಕಾನಂದರ ಸಂದೇಶ ಯಾವುದೇ ಜಾತಿ, ಧರ್ಮ, ರಾಜಕೀಯಕ್ಕೆ ಸೀಮಿತವಲ್ಲ:ಅಯೂಬ್ ಖಾನ್

ಮೈಸೂರು: ಸ್ವಾಮಿ ವಿವೇಕಾನಂದರ ಸಂದೇಶಗಳು ಯಾವುದೇ ಜಾತಿ ಧರ್ಮ ರಾಜಕೀಯಕ್ಕೆ ಸೀಮಿತವಲ್ಲ ಎಂದು ಕರ್ನಾಟಕ ವಸ್ತುಪ್ರದರ್ಶನ‌ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ನುಡಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಸ್ವಾಮಿ ವಿವೇಕಾನಂದರ 162ನೇ ಜಯಂತಿ ರಾಷ್ಟ್ರೀಯ ಯುವದಿನೋತ್ಸವ ಅಂಗವಾಗಿ ದಸರಾ ವಸ್ತುಪ್ರದರ್ಶನ‌ ಆವರಣದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ವಿವೇಕರ ನುಡಿಗಳು ವಿಶ್ವದೆಲ್ಲಡೆ ಭಾರತದ ವಿವಿಧತೆಯಲ್ಲಿ ಏಕತೆಯ ಸಮಾನತೆಯ ಜಾಗೃತಿ ಮೂಡಿಸಲು ಪ್ರಭಾವಬೀರಿತು, ವಿವೇಕಾನಂದರ ಅಮೇರಿಕಾ ಚಿಕಾಗೋ ಭಾಷಣ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತು ಎಂದು ಸ್ಮರಿಸಿದರು.

ದುಷ್ಚಟ, ದುರಭ್ಯಾಸ ಮುಂತಾದ ವ್ಯಸನಗಳಿಗೆ ಯುವ ಸಮೂಹ ಅಂಟಿಕೊಳ್ಳದೆ ಒಳ್ಳೆಯ ಶಿಕ್ಷಣ ಪಡೆದು ದುಡಿಮೆಯ ಹಾದಿಯಲ್ಲಿ ಭವಿಷ್ಯ ರೂಪಿಸಿಕೊಂಡು ದೇಶದ ಆಸ್ಥಿಯಾಗಿ ನಿರ್ಮಾಣವಾಗಬೇಕು ಎಂದು ಅಯೂಬ್ ಖಾನ್ ಕರೆ ನೀಡಿದರು. ‌

ಈ ಸಂಧರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ರಘುರಾಜೇ ಅರಸು, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ರಾಕೇಶ್, ನಿರೂಪಕ ಅಜಯ್ ಶಾಸ್ತ್ರಿ, ಲತಾ ರಂಗನಾಥ್, ರಮೇಶ್, ಪ್ರಕಾಶ್, ಸುರೇಶ್, ಮಂಜು, ಗುರುರಾಜ್ ಮತ್ತಿತರರು ಹಾಜರಿದ್ದರು.