ಬನ್ನಹಳ್ಳಿ ಗ್ರಾಮದಲ್ಲಿ ವೈಕುಂಠಾಧಿಪತಿ ದರ್ಶನ ಪಡೆದ ಸಾವಿರಾರು ಭಕ್ತರು

ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ಅಂಗವಾಗಿ ಶ್ರೀರಂಗಪಟ್ಟಣ ತಾಲೂಕಿನ ಬನ್ನಹಳ್ಳಿ ಗ್ರಾಮದಲ್ಲಿರುವ ತಿರುಮಲ ದೇವಾಲಯದಲ್ಲಿ ವೈಕುಂಠಾಧಿಪತಿ ಮಹಾ ವಿಷ್ಣುವಿಗೆ ಹೂವಿನ ಅಲಂಕಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಮುಂಜಾನೆ 2 ಗಂಟೆಯಿಂದ ತ್ರಿಭಂಗಿ ಸ್ವರೂಪದ ತಿರುಮಲ ದೇವರಿಗೆ ಪೂಜಾ ಕೈಂಕರ್ಯಗಳು ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನೆರವೇರಿತು.

ಸಿ.ಪಿ. ವಿದ್ಯಾಶಂಕರ್ ಮತ್ತು ಎಸ್.ಸಿ. ಬಸವರಾಜು ತಂಡಗಳಿಂದ ಭಕ್ತಿ ಗೀತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಅಲಂಕೃತ ಗೊಂಡಿರುವ ಶ್ರೀ ವೆಂಕಟೇಶ್ವರ ಮೂರ್ತಿಯನ್ನು ಭಕ್ತಾದಿಗಳು ಕಣ್ತುಂಬಿಕೊಂಡು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿ ತಮ್ಮ ಕೈಯಲ್ಲಾದ ಸೇವೆಯನ್ನು ಸಲ್ಲಿಸಿದರು.ನಂತರ ಎಲ್ಲರಿಗೂ ಪ್ರಸಾದ‌ ವಿನಿಯೋಗ ಮಾಡಲಾಯಿತು.