ಕಡಕೊಳದಲ್ಲಿ ಮತ್ತೆ ಆರಂಭವಾಗುತ್ತಿದೆ ಕುರಿ, ಮೇಕೆ, ಜಾನುವಾರು ಶನಿವಾರ ಸಂತೆ

Spread the love

ಮೈಸೂರು: ಕಡಕೊಳದಲ್ಲಿ ಸರ್ಕಾರದ ವತಿಯಿಂದ ನಿರ್ಮಾಣ‌ವಾಗಿರುವ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ಕುರಿ, ಮೇಕೆ, ಹಸು, ಜಾನುವಾರುಗಳ ಮಾರಾಟ ಸಂತೆ 15 ವರ್ಷಗಳ ನಂತರ ಮತ್ತೆ ಪ್ರಾರಂಭವಾಗುತ್ತಿದೆ.

ಕೃಷಿ ಉತ್ಪನ್ನ ಮಾರಾಟ ಇಲಾಖೆ ವತಿಯಿಂದ ರೈತರು ಸಾಕಾಣಿಕೆ ಮಾಡಿರುವ ಕುರಿ, ಮೇಕೆ, ಹಸು, ಜಾನುವಾರುಗಳನ್ನು ಯೋಗ್ಯ ಬೆಲೆಗೆ ಮಾರಾಟ ಮಾಡಲು ರೈತರಿಗೆ ಸಹಕಾರಿಯಾಗಲು ಕಡಕೊಳದಲ್ಲಿ ಸರ್ಕಾರದ ವತಿಯಿಂದ ಉಪ ಮಾರುಕಟ್ಟೆ ಪ್ರಾಂಗಣ ನಿರ್ಮಿಸಿ ಪ್ರತಿ ಶನಿವಾರ ಕುರಿ, ಮೇಕೆ, ಹಸು, ಜಾನುವಾರುಗಳ ಮಾರಾಟಕ್ಕಾಗಿ ಸಂತೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಕಳೆದ 15 ವರ್ಷಗಳಿಂದ ನಿಂತು ಹೋಗಿರುವ ಸಂತೆಯನ್ನು ಪುನಃ ಪ್ರಾರಂಭಿಸಲು ಪ್ರಯತ್ನಪಟ್ಟಿರುವ ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಬಹುವರ್ಷಗಳ ಬೇಡಿಕೆಗೆ ಈಗ ಫಲ ದೊರೆತಿದೆ.

ಈ ಸಂತೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದರಕ ಸಹಕಾರ ಸಂಘ ಸಿಂಧುವಳ್ಳಿ ಅವರಿಗೆ ವಹಿಸಲಾಗಿದೆ.
ಆದ್ದರಿಂದ ಮೈಸೂರು ಜಿಲ್ಲೆಯ ಎಲ್ಲಾ ರೈತರುಗಳು, ಕುರಿಗಾಹಿಗಳು ತಾವು ಸಾಕಿರುವ ಕುರಿ, ಮೇಕೆ, ಹಸು, ಜಾನುವಾರುಗಳನ್ನು ದಳ್ಳಾಳಿಗಳ ಮೊರೆ ಹೋಗದೆ ಯೋಗ್ಯ ಬೆಲೆಗೆ ಮಾರಾಟ ಮಾಡಲು ಹಾಗೂ ಕೊಂಡುಕೊಳ್ಳಲು ಈ ಸಂತೆಯು ತುಂಬಾ ಉಪಯೋಗವಾಗಲಿದೆ.

ಆದ್ದರಿಂದ ಜಿಲ್ಲೆಯಾದ್ಯಂತ ಇರುವ ರೈತರು ಶನಿವಾರ ಸಂತೆಯನ್ನು ಉತ್ತಮವಾಗಿ ಬಳಸಿಕೊಂಡು ಸಂತೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶ್ರೀ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಸ್.ಎಂ.ಚಂದ್ರಶೇಖರ್, ಸಿಂಧುವಳ್ಳಿಯವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9900956277 ಸಂಪರ್ಕಿಸಬಹುದು.