ಮೈಸೂರು: ಬಿಜೆಪಿ ಮುಖಂಡರು,ಕರ್ನಾಟಕ ರಾಜ್ಯ ರಿಯಲ್ ಎಸ್ಟೇಟ್ ನಿರ್ದೇಶಕರು ಮತ್ತು ಕಲ್ಯಾಣೇಶ್ವರ ದೆವಸ್ಥಾನದ ಆಡಳಿತ ಮಂಡಳಿ ಉಪಾದ್ಯಕ್ಷರಾದ ಬಿ.ಆನಂದ ಅವರು ಹೊಸ ವರ್ಷದ ಕ್ಯಾಲೆಂಡರ್ ಹೊರ ತಂದಿದ್ದಾರೆ.
ನೂತನ ವೃರ್ಷದ ಕ್ಯಾಲೆಂಡರನ್ನು ಬಿಜೆಪಿ ಮೈಸೂರು ನಗರ ಅಧ್ಯಕ್ಷರೂ ಮಾಜಿ ಶಾಸಕರಾದ ಎಲ್. ನಾಗೇಂದ್ರ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕರು ಶ್ರೀವತ್ಸ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ವೇಳೆ ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಮಾದೇವಸ್ವಾಮಿ, ಮೈಸೂರು ಜಿಲ್ಲಾ ಗ್ರಾಮಾಂತರ ಮಾಜಿ ಅಧ್ಯಕ್ಷರು ಮಂಗಳ ಸೋಮಶೇಖರ್, ಗ್ರಾಮಾಂತರ ಜಿಲ್ಲಾ ಮಾಜಿ ಅಧ್ಯಕ್ಷ ಹೇಮಂತ್ ಗೌಡ್ರು, ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷರು ರಾಜಕುಮಾರ,ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮಿರ್ಲೆ ಶ್ರೀನಿವಾಸ ಗೌಡ್ರು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದು ಬಿ.ಆನಂದ ಅವರಿಗೆ ಶುಭ ಕೋರಿದರು.
