ಮೈಸೂರು: ಕನ್ನಡ ರಾಜ್ಯೋತ್ಸವವನ್ನು ಕೇವಲ ಕನ್ನಡ ಹೋರಾಟಗಾರರು ಮತ್ರವಲ್ಲ ರಾಜ್ಯದ ಪ್ರತಿಯೊಬ್ಬ ಜನತೆ ಆಚರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್ ಮಂಜೇಗೌಡ ಕರೆ ನೀಡಿದರು.
ಕರ್ನಾಟಕ ಸೇನಾ ಪಡೆ ಮೈಸೂರಿನ ವಿವೇಕಾನಂದ ನಗರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ಕುವೆಂಪು ಜಯಂತಿ
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯದ ಬಹಳಷ್ಟು ಮಹನೀಯರ ಹೋರಾಟ ಮಾಡಿದ್ದರ ಫಲವಾಗಿ ಇಂದು ಅಖಂಡ ಕರ್ನಾಟಕ ವಾಗಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದ ಮೇಲೆ ಆಯಾಯ ಭಾಷೆಯನ್ನು ಮಾತನಾಡುವ ಜನರನ್ನು ಒಗ್ಗೂಡಿಸಿ, ಅಂದರೆ ಮುಂಬೈ ಕರ್ನಾಟಕ, ಮದ್ರಾಸ್ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಲ್ಲ ಒಗ್ಗೂಡಿಸಿ ಮೈಸೂರು ರಾಜ್ಯವಾಗಿದ್ದನ್ನು ಅಖಂಡ ಕರ್ನಾಟಕವೆಂದು ನಾಮಕರಣ ಮಾಡಲಾಯಿತು ಎಂದು ಹೇಳಿದರು.
ಬೆಂಗಳೂರಿನಲ್ಲಿ ಈಗೀಗ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಮಂಜೇಗೌಡ ವಿಷಾದಿಸಿದರು.
ಕರ್ನಾಟಕ ಸೇನಾ ಪಡೆಯು ಮೈಸೂರಿನಲ್ಲಿ ನೆಲ ಜಲ ಭಾಷೆಯ ಪರವಾಗಿ ಅತ್ಯಂತ ಕ್ರಿಯಾಶೀಲವಾಗಿ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡಿಗರೆಲ್ಲರೂ ಹೆಚ್ಚು ಹೆಚ್ಚು ಕನ್ನಡವನ್ನು ಬಳಸಬೇಕು ಮೊಬೈಲ್ ಗಳಲ್ಲಿ ಸಹ ಮೆಸೇಜುಗಳನ್ನು ಮಾಡುವಾಗ ಹೆಚ್ಚು ಕನ್ನಡವನ್ನೇ ಬಳಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಎಪಿಎನ್ ಪ್ರಾಪರ್ಟಿಸ್ ಪಾಲುದಾರ ಎ ಪಿ ನಾಗೇಶ್, ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್, ಸಮಾಜ ಸೇವಕರಾದ ಕೆ.ಎನ್ ಧನ್ಯ ಕುಮಾರ್, ಮಹಾತ್ಮ ಗಾಂಧಿ ಬಿಎಡ್ ಕಾಲೇಜಿನ ಅಧ್ಯಕ್ಷ ಆದಿಶೇಷಗೌಡ ಟಿ ಜಿ, ಬಿಜೆಪಿ ಮುಖಂಡರಾದ ಸುಮಿತ್ರ ರಮೇಶ್, ಮೈಸೂರು ದೇವರಾಜ ಮಾರುಕಟ್ಟೆ ಅಧ್ಯಕ್ಷ ಕೆ ದಿನೇಶ್, ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಡಾ. ಸಿ ವೆಂಕಟೇಶ್, ಧಾರ್ಮಿಕ ಕ್ಷೇತ್ರದ ಮುಖಂಡ ಡಾ. ಶ್ರೀಶ ಭಟ್, ಮೈಸೂರು ಜಿಲ್ಲೆಯ ಬಿ ಟಿವಿಯ ಮುಖ್ಯ ವರದಿಗಾರ ಬಿ ರಾಘವೇಂದ್ರ, ದಿ ಮೈಸೂರ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಶ್ರೀ ಎಸ್ ಅರವಿಂದ್, ಕನ್ನಡ ಚಳವಳಿ ಹಿರಿಯ ಹೋರಾಟಗಾರ ಬಿ ಎ ಶಿವಶಂಕರ್, ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ ಅವರುಗಳಿಗೆ ಕರ್ನಾಟಕ ಸೇನಾ ಪಡೆಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2024 ನ್ನು ಶಾಸಕ ಟಿ ಎಸ್ ಶ್ರೀವತ್ಸ ಅವರು ಪ್ರದಾನ ಮಾಡಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಜನತೆಗೆ ಸಿಹಿ ವಿತರಿಸಿದರು, ಸಮಾಜ ಸೇವಕ ಡಾ. ಸಿ ವೈ ಶಿವಗೌಡರು ಮಕ್ಕಳಿಗೆ ಬಟ್ಟೆ, ಪುಸ್ತಕ ಸಾಮಗ್ರಿಗಳನ್ನು ವಿತರಣೆ ಮಾಡಿದರು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ. ರಾಂ ಶ್ರೀನಿವಾಸ ಗೌಡ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಉಪಾಧ್ಯಕ್ಷ ಡಾ. ಬಿ.ಆರ್ ನಟರಾಜ ಜೋಯ್ಸ್, ಹನುಮಂತಯ್ಯ, ಪ್ರಭುಶಂಕರ, ವಿಜಯೇಂದ್ರ , ರವಿ ನಾಯಕ, ವರಕೂಡು ಕೃಷ್ಣೆಗೌಡ, ಸಿಂಧುವಳ್ಳಿ ಶಿವಕುಮಾರ್, ಮೊಗಣ್ಣಾಚಾರ್, ನೇಹ, ಭಾಗ್ಯಮ್ಮ, ಪ್ರಜೀಶ್,ಅಂಬಾ ಅರಸ್, ಡಾ. ನರಸಿಂಹೇ ಗೌಡ, ಪ್ರಭಾಕರ್, ಮಲ್ಲೇಶ್, ಮಹದೇವ ಸ್ವಾಮಿ ಗೌಡ, ಗೀತಾ ಗೌಡ, ನಾರಾಯಣ ಗೌಡ, ಬಿ.ಟಿ ಬಸವರಾಜು, ಪ್ರಕಾಶ್, ಲಕ್ಷ್ಮೀ , ಭಾಗ್ಯಮ್ಮ ಮಲ್ಲೇಶ್, ಶಿವರಾಮೇಗೌಡ, ಎಳನೀರು ರಾಮಣ್ಣ, ದರ್ಶನ್ ಗೌಡ ಮತ್ತಿತರರು ಉಪಸ್ಥಿತರಿದ್ದರು.