ಇನ್ಪೋಸಿಸ್‌ನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

Spread the love

ಮೈಸೂರು: ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡು ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಅರಣ್ಯ ಇಲಾಖೆಯ ಚಿರತೆ ಕಾರ್ಯ ಪಡೆ,
ಮೈಸೂರು ಪ್ರಾದೇಶಿಕ ವಲಯದ ಸಿಬ್ಬಂದಿ ಕಾರ್ಯಾಚಣೆ ನಡೆಸುತ್ತಿದ್ದಾರೆ.

ಇನ್ಫೋಸಿಸ್ ಆವರಣದಲ್ಲಿ
ಹೆಜ್ಜೆ ಗುರುತು ಆಧರಿಸಿ ಕಾರ್ಯಾಚರಣೆ ಮುಂದುವರಿದೆದೆ.

ಚಿರತೆ ಸೆರೆಗೆ ಹೆಚ್ಚುವರಿಯಾಗಿ 10 ಕ್ಯಾಮೆರಾ ಟ್ರ್ಯಾಪ್, ಒಂದು ಸಾಮಾನ್ಯ ಬೋನು,
ಇನ್ನೊಂದು ಟ್ರ್ಯಾಪ್ ಬೋನು ಅಳವಡಿಸಲಾಗಿದೆ.

ಒಂದು ಚಿರತೆ ಕಾರ್ಯಪಡೆ ತಂಡ ಕ್ಯಾಂಪಸ್ ನಲ್ಲೇ ಬೀಡುಬಿಟ್ಟಿದ್ದು,
ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಕ್ಯಾಮೆರಾ , ಕ್ಯಾಂಪಸ್ ಸಿಸಿ ಕ್ಯಾಮೆರಾಗಳ ಮೂಲಕ ಸಿಬ್ಬಂದಿ ತೀವ್ರ ನಿಗಾವಹಿಸಿದೆ.