ಜನವರಿ 11ರಂದು‌ ಎಸ್ ಎಮ್ ಕೃಷ್ಣ ಅವರಿಗೆ ಶ್ರದ್ಧಾಂಜಲಿ

ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್ ಎಮ್ ಕೃಷ್ಣ ರವರಿಗೆ ಶ್ರದ್ಧಾಂಜಲಿ ಸಭೆಯನ್ನು ಜನವರಿ 11ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.

ವಿಜಯನಗರದ ವಿದ್ಯಾವರ್ಥಕ ಇಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಎಸ್ ಚೆನ್ನಯ್ಯ ಸಭಾಂಗಣದಲ್ಲಿ‌ ಸಂತಾಪ ಸೂಚಕ ಸಭೆ ನಡೆಯಲಿದೆ.

ಮೈಸೂರು ಮಹಾನಗರ ಮತ್ತು ಜಿಲ್ಲಾ ನಾಗರಿಕರ ಸಮಿತಿ ಹಾಗೂ ಮಂಡ್ಯ ಜಿಲ್ಲಾ ಬಳಗ ಮೈಸೂರು ವತಿಯಿಂದ ಈ ಸಭೆ ಹಮ್ಮಿಕೊಳ್ಳಲಾಗಿದೆ.

ಇಂದು ಸಂತಾಪ ಸೂಚನ ಸಭೆಯ ಪೂರ್ವಭಾವಿ ಸಭೆಯನ್ನು ಟಿ ಕೆ ಲೇಔಟ್ ನಲ್ಲಿರುವ ಮೈಸೂರು ಮಹಾನಗರ ಮತ್ತು ಜಿಲ್ಲಾ ನಾಗರಿಕ ಸಮಿತಿಯ ಕಚೇರಿಯಲ್ಲಿ
ನಡೆಸಲಾಯಿತು.

ಮೊದಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿ ಆನಂತರ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಪ್ರೊಫೆಸರ್ ಕಾಳೆ ಚೆನ್ನೇಗೌಡ, ಪ್ರೊಫೆಸರ್ ಚಂದ್ರಶೇಖರ್ ಗೌಡ, ಜಯರಾಮ್ ಕಿಲ್ಲಾರ,ಮರೆತಿಬ್ಬೇಗೌಡ, ಲಯನ್ ದೇವೇಗೌಡ, ಹೇಮಾ ನಂದೀಶ್, ಕೆ ವಿ ಶ್ರೀಧರ್, ಕೆ ವಿ ಮಲ್ಲೇಶ್,ಒಕ್ಕಲಿಗರ ಸಂಘದ ನಿರ್ದೇಶಕರಾದ ಮಂಜೇಗೌಡ, ಸತೀಶ್ ಗೌಡ ಸೇರಿದಂತೆ ನೂರಾರು ಮುಖಂಡರು ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದರು.