ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ವಿತರಿಸಿ ವಿಷ್ಣುವರ್ದನ್ ಸ್ಮರಣೆ

Spread the love

ಮೈಸೂರು: ಡಾಕ್ಟರ್ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆಯನ್ನು‌ ಶಾಲಾಮಕ್ಕಳೊಂದಿಗೆ ವಿಷ್ಣುಸೇನಾ ಬಳಗದವರು ಅರ್ಥಪೂರ್ಣ ವಾಗಿ ಆಚರಿಸಿದರು.

ಮೈಸೂರಿನ ಕೆಆರ್ ಮಿಲ್ ಕಾಲೋನಿಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ಮತ್ತು ಪೆನ್ ವಿತರಣೆ ಮಾಡುವ ಮೂಲಕ ವಿಷ್ಣು ಸ್ಮರಣೆ ಮಾಡಲಾಯಿತು.

ರಾತ್ರಿ ಡಾಕ್ಟರ್ ವಿಷ್ಣುವರ್ಧನ್ ಅವರ ಫೋಟೋ ಇಟ್ಟು ಪೂಜೆ ಮಾಡಲಾಯಿತು.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಹಾಗೂ ಶಿಕ್ಷಕಿ ರಮ್ಯಾ ಮತ್ತು ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಜಶೇಖರ್ ಮೂರ್ತಿ ಅವರ ಸಮ್ಮುಖದಲ್ಲಿ ಈ ಸಂದರ್ಭದಲ್ಲಿ ವಿಷ್ಣುಸೇನಾ ಬಳಗದ ಅಧ್ಯಕ್ಷರಾದ ಆನಂದ್ ಗೌಡ್ರು, ನಿರ್ದೇಶಕರಾದ ರವಿ ಗೌಡ್ರು, ವಿದ್ಯಾರ್ಥಿಗಳಿಗೆ ಬುಕ್ಕು ಮತ್ತು ಪೆನ್ ವಿತರಿಸಿದರು.

ಕೆಲವರು ವಿಷ್ಣುವರ್ದನ್ ಚಿತ್ರವಿರುವ ಟಿ ಶರ್ಟ್‌ ಧರಿಸಿ ಗಮನ ಸೆಳೆದರೆ ಆನಂದ್ ಗೌಡ ವಿಷ್ಣುವಿನಂತೆ ವೇಷ ಧರಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ನಿರ್ದೇಶಕರಾದ ವಾಸು, ವೇಲು, ಜೋಗಿ, ವಿನೋದ್, ಶ್ರೀನಿವಾಸ್, ರಮೇಶ್, ಶಶಿಕುಮಾರ್, ಜೆಡಿಎಸ್ ಮುಖಂಡರಾದ ಪ್ರಸನ್ನ ಗೌಡ್ರು, ಯೋಗೇಶ್, ವಿಷ್ಣು ಸೇನಾ ಸದಸ್ಯ ರವಿ, ಶಶಿಕುಮಾರ್, ವಿನೋದ್ ಕುಮಾರ್, ವಿಷ್ಣು ಅಭಿಮಾನಿ ರಮೇಶ್ ಮತ್ತಿತರ ಅಭಿಮಾನಿಗಳು ಉಪಸ್ಥಿತರಿದ್ದರು.