ಕುವೆಂಪು,ಸಿ.ಅಶ್ವಥ್ ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರ ಸ್ಥಂಭಗಳು:ನಾಗಚಂದ್ರ

Spread the love

ಮೈಸೂರು: ರಾಷ್ಟ್ರಕವಿ ಕುವೆಂಪು ಹಾಗೂ ಸ್ವರಮಾಂತ್ರಿಕ ಸಿ.ಅಶ್ವಥ್ ಅವರು ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರಸ್ಥಂಭಗಳು ಎಂದು ಗೃಹಶೋಭೆ ನಿರ್ದೇಶಕರಾದ ನಾಗಚಂದ್ರ ತಿಳಿಸಿದರು.

ಮೈಸೂರಿನ‌ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಗೃಹಶೋಭೆ ವಸ್ತುಪ್ರದರ್ಶನ‌ದಲ್ಲಿ ರಾಷ್ಟ್ರಕವಿ ಕುವೆಂಪು ಅವರ 120ನರೆ ಜಯಂತಿ ಹಾಗೂ ಸ್ವರಮಾಂತ್ರಿಕ ಸಿ. ಅಶ್ವಥ್ ಅವರ ನೆನಪಿನಲ್ಲಿ ಅರುಣರಾಗ ಕ್ರಿಯೇಷನ್ಸ್ ವತಿಯಿಂದ ನಡೆದ ಕನ್ನಡವೇ ಸತ್ಯ ಸುಗಮ ಸಂಗೀತ ಕಾರ್ಯಕ್ರಮದ ವೇಳೆ‌ ನಾಗಚಂದ್ರ ಮಾತನಾಡಿದರು.

ನಾಗಚಂದ್ರ ಅವರು ಕುವೆಂಪು ಮತ್ತು ಸಿ. ಅಶ್ವಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಸಂಗೀತದ ರಾಗ ತಾಳ ನಾದ ಸ್ವರಗಳು ಮನುಷ್ಯನ ಅಂತರಂಗದ ಭಾವನೆಗಳಿಗೆ ಜೀವತುಂಬುತ್ತದೆ, ಸಂಗೀತಕ್ಕೆ ರೋಗಗುಣಪಡಿಸುವ ಶಕ್ತಿಯಿದೆ ವೈಜ್ಞಾನಿಕವಾಗಿ ದೃಡವಾಗಿದೆ ಎಂದು ಹೇಳಿದರು.

1924ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ರಚನೆಯ ಜಯಭಾರತ ಜನನಿಯ ತನುಜಾತೆ ನಾಡಗೀತೆ ಶತಮಾನೋತ್ಸವ ಕಂಡಿದೆ, ಸಿ.ಅಶ್ವಥ್ ಅವರು ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ರಚನೆಯ ಭಾವಗೀತೆಗಳಿಗೆ ಸಂಗೀತ ನಿರ್ದೇಶಿಸಿ ಹಾಡುವ ಮೂಲಕ ಕೋಟ್ಯಾಂತರ ಕಲಾಭಿಮಾನಿಗಳ ಮನದಲ್ಲಿ ಶಾಶ್ವತವಾಗಿದ್ದಾರೆ ಎಂದು ಬಣ್ಣಿಸಿದರು.

ರಾಷ್ಟ್ರಕವಿ ಕುವೆಂಪು ಮತ್ತು ಸ್ವರಮಾಂತ್ರಿಕ ಸಿ. ಅಶ್ವಥ್ ಮಹನೀಯರು ಕನ್ನಡ ಸಾಹಿತ್ಯ ಸಂಗೀತ ಲೋಕದ ಆಧಾರಸ್ಥಂಭವಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂಧರ್ಭದಲ್ಲಿ ಗೃಹಶೋಭೆ ವ್ಯವಸ್ಥಾಪಕ ಕೃಷ್ಣ, ನವೀನ್, ವಿಶ್ವಾಸ್, ಮಧು, ಮಹೇಶ್, ನಿರೂಪಕ ಅಜಯ್ ಶಾಸ್ತ್ರಿ, ರಂಗಸ್ವಾಮಿ ಪಾಪು, ಒಂಟಿಕೊಪ್ಪಲು ಗುರುರಾಜ್ ಅರುಣರಾಗ ಕ್ರಿಯೇಷನ್ಸ್ ಗಾಯಕರಾದ ಡಾ. ರೇಖಾ ಅರುಣ್, ಗುರುರಾಜ್, ನಾದಮಯ ಪ್ರೇಮ್ , ರೂಪ್ ಕುಮಾರ್, ನಾರಯಣಸ್ವಾಮಿ, ಅಪೂರ್ವ, ರಂಗಸ್ವಾಮಿ, ಗೀತಾ, ಶಶಿಕಾಂತ್ ಮತ್ತಿತರರು ಹಾಜರಿದ್ದರು.