ವಿಷ್ಣು ಪುಣ್ಯಸ್ಮರಣೆ ಪ್ರಯುಕ್ತ ನಾಳೆಸ್ವಯಂ ಪ್ರೇರಿತ ರಕ್ತದಾನ ಶಿಬಿರ

Spread the love

ಬೆಂಗಳೂರು: ವಿ ಎಸ್ ಎಸ್ ಅಭಿಮಾನ್ ಡಾಕ್ಟರ್ ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಬಿ ಎಸ್ ಕೆ ಜೀವಾಶ್ರಯ ರಕ್ತ ಕೇಂದ್ರ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಆದರ್ಶ 317 ಎ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಡಾಕ್ಟರ್ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಅಭಿಮಾನ್ ಸ್ಟುಡಿಯೋದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ರಾಜುಗೌಡ, ಅಧ್ಯಕ್ಷ ಶ್ರೀಧರ ಮೂರ್ತಿ, ಗೌರವಾದ್ಯಕ್ಷ ಬಿ ವೈ ರಮೇಶ್ ತಿಳಿಸಿದ್ದಾರೆ.

ಡಿ.30 ರಂದು ನಟ ವಿಷ್ಣುವರ್ಧನ್ ಅವರ 15ನೇ ಪುಣ್ಯಸ್ಮರಣೆಯ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.

ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಸಮಾಧಿಯ 10 ಗುಂಟೆ ಪವಿತ್ರ ಸ್ಥಳದಲ್ಲಿ ಪೂಜಾ ಕಾರ್ಯಕ್ರಮ ಮತ್ತು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಜೊತೆ ಜೀವ ಉಳಿಸುವ ಮಹಾನ್ ಪುಣ್ಯದ ಕೆಲಸವಾದ ರಕ್ತದಾನ ಶಿಬಿರ ಸಹ ಹಮ್ಮಿಕೊಳ್ಳಲಾಗಿದ್ದು, ವಿಷ್ಣು ಅಪ್ಪಾಜಿ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಲಿದ್ದಾರೆ ಎಂದು ರಾಜುಗೌಡ ತಿಳಿಸಿದರು.

ಇದೇ ವೇಳೆ ನಟ ರಮೇಶ್ ಭಟ್, ಸಂಘದ ಗೌರವ ಅಧ್ಯಕ್ಷ ಬಿ.ವೈ ರಮೇಶ್, ಅಧ್ಯಕ್ಷರಾದ ಶ್ರೀಧರ ಮೂರ್ತಿ, ಕಾರ್ಯದರ್ಶಿ ನಾರಾಯಣ ಕೆ, ಉಪಾಧ್ಯಕ್ಷರಾದ ಹರೀಶ್ ಗೌಡ, ಪದಾಧಿಕಾರಿಗಳಾದ ಸ್ನೇಹಾ ರಶ್ಮಿ ಸಾರಂಗ್, ಚಂದಹಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಳಿಗೆ ಫೋನ್ ನಂಬರ್ 080 2227337 ಹಾಗೂ 8792541222 ಮತ್ತು 9148653535 ಸಂಪರ್ಕಿಸಬಹುದು.