ಮೈಸೂರು: ತೃಪ್ತಿದಾಯಕ ಬದುಕಿಗೆ ಅಧ್ಯಾತ್ಮವೇ ಮೂಲ ಎಂದು ವಿದ್ವಾನ್ ಶ್ರೀ ಬಾಗೇವಾಡಿ ಆಚಾರ್ಯ ಅವರು ಹೇಳಿದರು.
ನಗರದ ಸಿಎಫ್‌ಟಿಆರ್‌ಐ ಪಕ್ಕದಲ್ಲಿರುವ ಶ್ರೀ ಉತ್ತರಾದಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಿದ್ದ ಪವಮಾನ, ನವಗ್ರಹ ಹೋಮ, ಪ್ರಾಣ ದೇವರಿಗೆ ಮಧು ಅಭಿಷೇಕ, ರೇಷ್ಮೆ ವಸ್ತ್ರ ಸೇವಾ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.
ಪ್ರತಿಯೊಬ್ಬರು ಒತ್ತಡದ ಬದುಕಿನ ಜಂಜಾಟದ ನಡುವೆಯೂ ಅಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಠದ ವ್ಯವಸ್ಥಾಪಕ ಅನಿರುದ್ದಾಚಾರ್ಯ ಪಾಂಡುರಂಗಿ, ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಅಚ್ಯುತ ಆಚಾರ್, ಪ್ರಮೋದ್ ಆಚಾರ್, ಕಾಂಗ್ರೆಸ್ ಯುವ ಮುಖಂಡರಾದ ಎನ್. ಎಂ ನವೀನ್ ಕುಮಾರ್,ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್,ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಎಸ್. ಬಿ ವಾಸುದೇವಮೂರ್ತಿ, ಜಯಂತ್, ವಿಕಾಶ್ ಶಾಸ್ತ್ರಿ ಮತ್ತಿತರರು ಹಾಜರಿದ್ದರು.