ಬೆಂಗಳೂರು: ನಾಡಿನಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮ, ಸಡಗರದಿಂದ ಆಚರಣೆ ಮಾಡಿದರು.

ನಿನ್ನೆ ಇಡೀ ರಾತ್ರಿ ಏಸು ಭಕ್ತರು ಚರ್ಚ್ ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಏಸು ಸ್ವಾಮಿ ಹಾಗೂ ಮೇರಿ ಮಾತಾಗೆ ಕ್ಯಾಂಡಲ್ ಬೆಳಗಿ ಪ್ರಾರ್ಥಿಸಿ ತಮ್ಮ ಮನದ ಆಶಯಗಳನ್ನು ಸಲ್ಲಿಸಿದರು.

ರಾಜ್ಯಾದ್ಯಂತ ಆಯಾ ಚರ್ಚ್ ಗಳಿಗೆ ಕ್ರೈಸ್ತ ಧರ್ಮೀಯರು ಭೇಟಿ ನೀಡಿದರು. ರಾತ್ರಿಯಿಡೀ ಪ್ರೇಯರ್ ಮಾಡಿದರು.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಸೇಂಟ್ ಬೆಸಲಿಕಾ ಚರ್ಚ್ ಗೆ ಸಹಸ್ರಾರು ಮಂದಿ ಭೇಟಿ ನೀಡಿದರು.ಕೇವಲ ಕ್ರೈಸ್ತ ಧರ್ಮೀಯರಸ್ಟೇ ಅಲ್ಲ ಇತರರು ಕೂಡಾ ಏಸುಕ್ರಿಸ್ತನ ಕಣ್ತುಂಬಿಕೊಂಡು ಪ್ರಾರ್ಥಿಸಿದರು.

ಮಹಿಳೆಯರು, ಮಕ್ಕಳು ಅತಿ ಹೆಚ್ಚು ಸಂಖ್ಯೆ ಯಲ್ಲಿ ಆಗಮಿಸಿದ್ದರು.ಚರ್ಚ್ ಸುತ್ತ ಎಲ್ಲಿ ನೋಡಿದರಲ್ಲಿ ಜನವೋ ಜನ ಕಣುತ್ತಿದ್ದರು.
