ಮೈಸೂರು: ಟೀಂ ಮೈಸೂರು ವತಿಯಿಂದ ರೈತ ದಿನಾಚರಣಯನ್ನು ಜಿಲ್ಲೆಯ ನಂಜನಗೂಡಿನಲ್ಲಿ ಕೃಷಿ ಕಾಯಕ ಮಾಡುತ್ತಿರುವ ರವಿಚಂದ್ರ ಅವರ ನಂದಿನಿ ವನ ದಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಪಾರಂಪರಿಕ ಮತ್ತು ವೈಜ್ಞಾನಿಕವಾಗಿ ಸಾವಯವ ಪದ್ಧತಿಯಲ್ಲಿ ಮಿಶ್ರ ಬೇಸಾಯ ಮಾಡುತ್ತಿರುವ ರವಿಚಂದ್ರ ಮತ್ತು ಅವರ ಕುಟುಂಬ ಕೃಷಿಯಲ್ಲಿ ಸಾರ್ಥಕತೆ ಗಳಿಸಿದ್ದಾರೆ.
ಟೀಂ ಮೈಸೂರು ತಂಡ ಅವರ ತೋಟಕ್ಕೆ ತೆರಳಿ ರವಿಚಂದ್ರ ಅವರ ಕುಟುಂಬದೊಂದಿಗೆ ಸೌಹಾರ್ದ ಯುತವಾಗಿ ಬೆರೆತು
ಅವರ ಅನುಭವವನ್ನು ತಿಳಿದುಕೊಂಡಿತು.
ಈ ವೇಳೆ ತಂಡದ ಗೋಕುಲ್ ಗೋವರ್ಧನ್ ಮಾತನಾಡಿ ದೇಶದ 5ನೇ ಪ್ರಧಾನ ಮಂತ್ರಿಗಳಾದ ಶ್ರೀ ಚೌದರಿ ಚರಣ್ ಸಿಂಗ್ ಅವರ ಜನ್ಮ ದಿನವನ್ನು
ಯಾಕೆ ರೈತ ದಿನಾಚರಣೆಯನ್ನಾಗಿ
ಆಚರಿಸಲಗುತ್ತದೆ, ಚರಣ್ ಸಿಂಗ್ ರೈತರ ಪರವಾಗಿ ತಮ್ಮ ಜೀವನಪರ್ಯಂತ ಹೋರಾಟ ಮಾಡಿಕೊಂಡು ಬಂದಿದ್ದರು ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಜಮೀನ್ದಾರ್ ಪದ್ಧತಿ ವಿರುದ್ಧ ಹೋರಾಡಿದರು, ಸದಾ ಸರಳ ಜೀವನ ನಡೆಸಿದ ಚರಣ್ ಸಿಂಗ್, ಸದಾ ಖಾದಿ ಉಡುಪನ್ನು ಬಳಸಿದರು, ಅವರಿಗೆ 2023ನೇ ಸಾಲಿನಲ್ಲಿ ಮರಣಣೋತ್ತರ
ಭಾರತ ರತ್ನ ನೀಡಿಲಾಗಿದೆ ಎಂದು ತಿಳಿಸಿದರು.
ರವಿಚಂದ್ರ ಅವರು ಕೃಷಿಯಿಂದ ವಿಮುಖರಾಗುತ್ತಿರುವ ಯುವಸಮೂಹವನ್ನು ಬಡಿದೆಬ್ಬಿಸುವ ರೀತಿಯಲ್ಲಿ ನಮ್ಮ ಕುಟುಂಬ ಕೆಲಸ ಮಾಡುತ್ತಿದೆ, ಕೃಷಿಯಿಂದ ಏನೆಲ್ಲಾ ಸಾಧ್ಯ ಎಂಬುದನ್ನು ಕಂಡುಕೊಂಡಿದ್ದೇವೆ 5 ಎಕರೇ ಯಲ್ಲಿ ಏಲಕ್ಕಿ ಬಾಳೆ ಬೆಳೆದು ಒಂದು ಬಾರಿಗೆ 18ಲಕ್ಷ ರೂ ಪಸಲನ್ನು ತೆಗೆದಿದೆದ್ದೇವೆ ಎಂದು ಮಾಹಿತಿ ನೀಡಿದರು
ನಾವು ಮೂಲತಃ ರೈತರಲ್ಲ, ಕುಂಚ ಕಲಾವಿದ 2019 ರ ಕೋವಿಡ್ ಸಂದರ್ಭದಲ್ಲಿ ಇಲ್ಲಿ ಬಂದು ಜಮೀನನ್ನು ತೆಗೆದುಕೊಂಡು ತೋಟ ಮಾಡಿದ್ದೇವೆ ನಾನು ಕೇವಲ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಗಳಿಸಿ, ಕಲಿತು ಯಶಸ್ವಿ ಕೃಷಿಕರಾಗಿದ್ದೇನೆ ಎಂದು ತಿಳಿಸಿದರು.
ಕೃಷಿಯಲ್ಲಿ ಶ್ರಮ ವಹಿಸಿ ದುಡಿದರೆ ಪ್ರತಿಫಲವಿದೆ, ತಾಳ್ಮೆ ಮುಖ್ಯ ಹಾಗೆ ಯಾವ ಯಾವ ರೀತಿಯಲ್ಲಿ ಬೆಳೆ ಮಾಡಿದರೇ ಒಳಿತು ಎಂದು ಅಪ್ಡೇಟ್ ಆಗಬೇಕು ಕೃಷಿಯನ್ನು ಪ್ರೀತಿಸಬೇಕು ಅವಾಗ ಯಶಸ್ಸು ತಾನಾಗಿಯೇ ಸಿಗುತ್ತದೇ ಎಂದು ಹೇಳಿದರು.

ಟೀಂ ಮೈಸೂರು ತಂಡದ ವತಿಯಿಂದ ರವಿಚಂದ್ರ ಹಾಗೂ ಧರ್ಮಪತ್ನಿ ಕಮಲಾ ಅವರನ್ನು ಗೌರವಿಸಲಾಯಿತು.
ಉರಗ ತಜ್ಞ ಗೋಳೂರು ಬಸವರಾಜು ಅವರು ಹಾವುಗಳ ಬಗ್ಗೆ ಅರಿವು ನೀಡಿದರು.
ಕಾರ್ಯಕ್ರಮದಲ್ಲಿ ರವಿಚಂದ್ರ ಅವರ ಪುತ್ರ ಮುರಳಿಕೃಷ್ಣ, ಪುತ್ರಿ ರಶ್ಮಿ ,ಪ್ರಕಾಶ್ ಮತ್ತು ಗೆಳಯರು ಹಾಜರಿದ್ದರು.
ಟೀಂ ಮೈಸೂರು ತಂಡದ ಸದಸ್ಯರುಗಳಾದ ಗೋಕುಲ್ ಗೋವರ್ಧನ್, ರಾಮಪ್ರಸಾದ್, ಯತೀಶ್, ಹೇಮಂತ್, ಬಾಲಕೃಷ್ಣ, ಹರೀಶ್ ಶೆಟ್ಟಿ, ಬಸವರಾಜು, ನವೀನ್ ಶೆಟ್ಟಿ , ಸೃಜನ್, ಬಸವರಾಜ್ ಫ್ಯಾಕ್ಟರಿ, ದಿನೇಶ್, ಸುನೀಲ್, ನಂದಿನಿ, ಮನೋಹರ್, ಕಲ್ಯಾಣಿ, ಮಿನುಗು, ಕಲ್ಯಾಣಿ, ವಿಸ್ಮಯ, ನಯನಿತಾ, ವೇಧಶ್ರೀ, ಯಶ್ಮಿತ್ ಭಾಗವಹಿಸಿದ್ದರು.