ಸಿ.ಟಿ.ರವಿ ಹೇಳಿಕೆಗೆ ರೇಖಾ ಶ್ರೀನಿವಾಸ್ ಖಂಡನೆ

Spread the love

ಮೈಸೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕೆಟ್ಟಪ ಬಳಕೆ ಮಾಡಿ ಸದನದ ಗೌರವಕೆ ಧಕ್ಕೆ ತಂದಿದ್ದಾರೆ. ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಕಿಡಿಕಾರಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅಗೌರವದ ಮಾತುಗಳನ್ನು ಆಡಿ ಮಹಿಳೆಯರನ್ನು ತುಚ್ಚವಾಗಿ ಕಂಡಿದ್ದಾರೆ. ಕೂಡಲೇ ಸಭಾಪತಿಗಳು ಸಿ.ಟಿ. ರವಿ ಅವರನ್ನು ಒಂದು ವರ್ಷಗಳ ಕಾಲ ಸದನದಿಂದ ಅಮಾನತ್ತುಗೊಳಿಸಬೇಕು ಎಂದು ಮಾಧ್ಯಮ ಪ್ರಕಟಣೆಯಲ್ಲಿ ರೇಖಾ ಆಗ್ರಹಿಸಿದ್ದಾರೆ.

ಪೊಲೀಸರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿ.ಟಿ.ರವಿ ಮಾತುಗಳು ಬಿಜೆಪಿ ನಾಯಕರ ಹೀನ ಮನಸ್ಥಿತಿ ಬಹಿರಂಗಗೊಳಿಸಿದೆ. ಯಾರೂ ಕೂಡಾ ಇಂತಹ ಅಸಂವಿಧಾನಿಕ ಪದ ಬಳಕೆ ಮಾಡಿರಲಿಲ್ಲ. ಸ್ವಲ್ಪವಾದರು ಮನುಷ್ಯತ್ವ ಇದ್ದರೇ ಸಿ.ಟಿ. ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಿಸಬೇಕು. ಇಲ್ಲವಾದಲ್ಲಿ ಅವರಿಗೆ ನಾಡಿನ ಮಹಿಳೆಯರು ಕಪ್ಪು ಮಸಿ ಬಳಿದು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ರೇಖಾ ಶ್ರೀನಿವಾಸ್ ಎಚ್ಚರಿಸಿದ್ದಾರೆ.

ದೇಶದಲ್ಲಿ ವಿಧಾಸಭೆ,ವಿಧಾನ ಪರಿಷತ್,ಲೋಕಸಭೆ,ರಾಜ್ಯಸಭೆ ಬಗ್ಗೆ ಎಲ್ಲರಿಗೂ ಬಹಳ ಗೌರವವಿದೆ.ಆದರೆ‌ ಹಿರಿಯರ ಚಾವಡಿಯಾದ ವಿಧಾನ ಪರಿಷತ್ ನಲ್ಲೇ‌ ಸಿ.ಟಿ.ರವಿ ಕೆಟ್ಟಪದ ಬಳಕೆ ಮಾಡಿರುವುದು ಅತ್ಯಂತ ಹೇಯ.ಇದನ್ನು ಇಡೀ ನಾಡಿನ ಮಹಿಳೆಯರು ಖಂಡಿಸಬೇಕು ಎಂದು ಅವರು ಕರೆ ನೀಡಿದ್ದಾರೆ.