ಅಮಿತ್ ಶಾ ರಾಜೀನಾಮೆಗೆ ರವಿ ಮಂಚೇಗೌಡನ ಕೊಪ್ಪಲು ಆಗ್ರಹ

Spread the love

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.
ಅಂಬೇಡ್ಕ‌ರ್ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿಕೆ ಖಂಡನೀಯ ಎಂದು
ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಅಮಿತ್‌ ಶಾ ಅವರು ಕೂಡಲೇ ದೇಶದ ಜನರ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಂಬೇಡ್ಕ‌ರ್ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಫ್ಯಾಷನ್ ಆಗಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ದೇವರ ಹೆಸರನ್ನು ಹೇಳಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದ ಪುಣ್ಯ ಬರುತಿತ್ತು ಎಂದು ಅಮಿತ್ ಶಾ ಹೇಳಿರುವುದು ಅವರ ಮನದಾಳದ ಮಾತಾಗಿದೆ. ದೇಶದ ಶೋಷಿತರು, ದಲಿತರು ಇನ್ನಾದರೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಗ್ಗೆ ಎಚ್ಚರದಿಂದ ಇರಬೇಕು‌ ಎಂದು ರವಿ
ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ಅಂಬೇಡ್ಕರ್ ಸಂವಿಧಾನದ ಮೇಲೆ ಗೌರವ, ಪ್ರೀತಿ ಇಲ್ಲ. ಆರ್‌ಎಸ್‌ಎಸ್ ಸಿದ್ಧಾಂತವೇ ಅವರಿಗೆ ಸಂವಿಧಾನವಾಗಿದೆ ಎಂದು ರವಿ ಮಂಚೇಗೌಡನ ಕೊಪ್ಪಲು ಟೀಕಿಸಿದ್ದಾರೆ.