ಜಗತ್ತಿಗೆ ಯೋಗದ ಪರಂಪರೆ ಬೆಸೆದ ಬಿ ಕೆ ಎಸ್ ಅಯ್ಯಂಗಾರ್-ರಘುರಾಮ್ ವಾಜಪೇಯಿ

Spread the love

ಮೈಸೂರು: ಇಡೀ ಜಗತ್ತಿಗೆ ತನ್ನದೇ ಆದ ಯೋಗದ ಪರಂಪರೆಯನ್ನು ತೋರಿಸಿಕೊಟ್ಟವರು ಬಿಕೆಎಸ್ ಅಯ್ಯಂಗಾರ್ ಎಂದು ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಬಣ್ಣಿಸಿದರು.

ಮೈಸೂರಿನ ಕೆ ಎಂ ಪಿ ಕೆ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಕೆಎಸ್ ಅಯ್ಯಂಗಾರ್ 106ನೇ ಜಯಂತೋತ್ಸವದಲ್ಲಿ
ಬಿಕೆಎಸ್ ಅಯ್ಯಂಗಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಗುರು ಕೃಷ್ಣಮಾಚಾರ್ಯರ ಗರಡಿಯಲ್ಲಿ ಬೆಳೆದ ಶಿಷ್ಯೋತ್ತಮ ಕಮ್ಯೂನಿಷ್ಟ್ ರಾಷ್ಟ್ರಗಳಲ್ಲೂ ಯೋಗದ ಕಂಪು ಪಸರಿಸಿದವರು ಜಗ ಮಾನ್ಯರು ಅಯ್ಯಂಗಾರ್‌ ಅವರು ಎಂದು ಹೇಳಿದರು.

ಭಾರತೀಯ ಯೋಗಕ್ಕೆ ತನ್ನದೇ ಆದ ನೆಲೆಯನ್ನು ತಂದುಕೊಟ್ಟವರು ಬಿಕೆಎಸ್. ಹೊಸ ಹೊಸ ಪರಿಕರಗಳನ್ನು ಹಾಗೂ ಉಪಕರಣಗಳನ್ನು ಬಳಸಿ ಯೋಗಾಸನ ಗಳನ್ನು ಲೀಲಾ ಜಾಲವಾಗಿ ಮಾಡುವ ನವ ಆವಿಷ್ಕಾರವನ್ನು ಕಂಡುಕೊಂಡು ಅದನ್ನು ಶಿಷ್ಯಕೋಟಿಗೆ ಬೋಧಿಸಿ ಯೋಗದಲ್ಲಿ ನಾವಿನ್ಯತೆಯನ್ನು ಪ್ರಚುರ ಪಡಿಸಿದವರು ಬಿಕೆಎಸ್.

ಅವರ ಅಪ್ರತಿಮ ಸಾಧನೆಗೆ ಇಡೀ ಜಗತ್ತೇ ಬೆರಗಾಯಿತು ಅಲ್ಲದೆ ಅವರನ್ನು ತಮ್ಮ ತಮ್ಮ ದೇಶಗಳಿಗೆ ಆಹ್ವಾನಿಸಲು ತುದಿಗಾಲಿನಲ್ಲಿ ನಿಂತವು ಜಗತ್ತಿನ ಅನೇಕಾನೇಕ ಪ್ರಶಸ್ತಿಗಳಿಗೆ ಭಾಜನರಾದರೂ ಅಹಮಿಕೆ ಇಲ್ಲದೆ ತಮ್ಮ ಸರಳ ಸಜ್ಜನಿಕೆ ಗಳನ್ನು ಜೀವನದುದ್ದಕ್ಕೂ ಬೆಳೆಸಿಕೊಂಡು ಉಳಿಸಿಕೊಂಡು ಬಂದವರು ಎಂದು ಬಿಕೆಎಸ್‌ ಅಯ್ಯಂಗಾರ್ ಅವರ ನಡೆಯನ್ನು ರಘುರಾಮ್‌‌ ವಾಜಪೇಯಿ ವಿವರಿಸಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ
ಭಾರತೀಯ ಪರಂಪರೆ ಸಾಂಸ್ಕೃತಿಕೆಯನ್ನು ವಿದೇಶಿಗರು ಅವರ ಜೀವನ ಶೈಲಿಯಲ್ಲಿ ಪಾಲಿಸುತ್ತಿದ್ದಾರೆ ಎಂದರೆ ಯೋಗ ಪ್ರಮುಖ ಪಾತ್ರವಹಿಸುತ್ತದೆ, ತಾಂತ್ರಿಕ ಮತ್ತು ಜಾಗತೀಕರಣದಲ್ಲಿ ಮನಃಶಾಂತಿ ಮತ್ತು ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕೆಂದರೆ ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿ ರಾಘವೇಂದ್ರ ಆಲನಹಳ್ಳಿ, ಎಂ, ಎನ್ ಚೇತನ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ಚಕ್ರಪಾಣಿ, ಸುಚಿಂದ್ರ, ಯುವ ಮುಖಂಡ ಸಚಿನ್ ನಾಯಕ್, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.