ಗ್ರಾಹಕರ ಹಿತರಕ್ಷಣಾ ಕಾಯಿದೆಯನ್ವಯ ಪರಿಹಾರ ಪಡೆಯಬಹುದು: ಸಿ ಎಸ್ ಚಂದ್ರಶೇಖರ್

Spread the love

ಮೈಸೂರು: ಗ್ರಾಹಕರು ಮೋಸ ಹೋದಾಗ ಗ್ರಾಹಕರ ಹಿತರಕ್ಷಣಾ ಕಾಯಿದೆಯನ್ವಯ ಪರಿಹಾರ ಪಡೆಯಬಹುದು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಜಿಲ್ಲಾಧ್ಯಕ್ಷ ಸಿ ಎಸ್ ಚಂದ್ರಶೇಖರ್ ಹೇಳಿದರು.

ನಗರದ ಜೆ ಪಿ ನಗರದಲ್ಲಿರುವ ಪುಟ್ಟರಾಜು ಗವಾಯಿ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಏರ್ಪಡಿಸಿದ್ದ ಗ್ರಾಹಕ ಜಾಗರಣ ಪಾಕ್ಷಿಕ -2024 (ಗ್ರಾಹಕ ಜಾಗರಣ ಪಖ್ವಾಡ) ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ಮೋಸ ಹೊದಾಗ ದೂರನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕೆಂಬ ಗೊಂದಲಗಳಿಂದ ದೂರು ಸಲ್ಲಿಸುವುದಿಲ್ಲ, ಗ್ರಾಹಕ ವೇದಿಕೆಯು ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಶೇ. 90 ರಷ್ಟು ಗ್ರಾಹಕರ ಪರವಾಗಿ ಪ್ರತಿಕ್ರಿಯಿಸುತ್ತದೆ. ಗ್ರಾಹಕ ಹಿತರಕ್ಷ ಣಾ ಕಾಯಿದೆ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿಯಾಗಬೇಕು ಎಂದು ತಿಳಿಸಿದರು.

ವಕೀಲರಾದ ರವೀಂದ್ರ ಮಾತನಾಡಿ
ಇಂದಿನ ಮಾರುಕಟ್ಟೆ ಡಿಜಿಟಲ್‌ ಮಾರುಕಟ್ಟೆಯಾಗಿ, ಆನ್‌ ಲೈನ್‌ ವ್ಯವಹಾರ ಮಾಡಲು ಯುವ ಜನರು ಉತ್ಸುಕರಾಗಿರುತ್ತಾರೆ. ಇಲ್ಲೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಗ್ರಾಹಕರು ಮೋಸ ಹೋದ ನಿದರ್ಶನಗಳಿವೆ. ಆದ್ದರಿಂದ ಡಿಜಿಟಲ್‌ ಮಾರುಕಟ್ಟೆಯಲ್ಲಿ ಗ್ರಾಹಕರು ಜಾಗೃತರಾಗಿರುವದು ಅವಶ್ಯಕ ಎಂದು ಹೇಳಿದರು.

ಕಾರ್ಯಕ್ರಮ ದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ರವಿಶಂಕರ್, ಆನಂದ್ ದಯಾನಂದ್, ಜೆಪಿ ನಗರದ ಹಿರಿಯ ನಾಗರಿಕರ ಸತ್ಸಂಗ ಬಸವರಾಜ್, ಜೈ ಗುರುದೇವ್, ಬಸವರಾಜ್, ಶೇಷಾದ್ರಿ, ಶ್ರೀಕಂಠಯ್ಯ, ಶ್ರೀನಿವಾಸ್ ಗೌಡ, ಪುಟ್ಟ ಮಾದಪ್ಪ ಮತ್ತಿತರರು ಭಾಗವಹಿಸಿದ್ದರು.