ಮೈಸೂರು,ಆ.22:ಚಾಮುಂಡಿಪುರಂನಲ್ಲಿರುವ ಅರುಣೋದಯ ವಿಶೇಷ ಶಾಲಾ ಮಕ್ಕಳಿಗೆ ಮಹರ್ಷಿ ಶಾಲೆಯ ವ್ಯವಸ್ಥಾಪಕ ಅಧ್ಯಕ್ಷರಾದ ಭವಾನಿ ಶಂಕರ್ ಸಮವಸ್ತ್ರ ಹಾಗೂ ಊಟ ವಿತರಿಸಿದರು.
ಈ ವೇಳೆ ಮಾತನಾಡಿದ ಭವಾನಿ ಶಂಕರ್,
ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ಕಲ್ಪಿಸಬೇಕು,ಈ ಮಕ್ಕಳ ಪೋಷಣೆ, ಶಿಕ್ಷಣ, ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.
ಅನೇಕ ವಿಕಲಚೇತನರು ಹಲವಾರು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ, ಅಂತಹ ಸಾಧಕರ ಜೀವನವನ್ನು ಮಾದರಿಯಾಗಿ ಅನುಸರಿಸಿ, ಕೀಳರಿಮೆ ಹೊಂದದೇ ಉತ್ತಮವಾದುದುನ್ನು ಸಾಧಿಸಲು ಶ್ರಮಿಸಬೇಕು, ಸರ್ಕಾರದ ಸವಲತ್ತುಗಳನ್ನು ಸದುಪಯೋಗ
ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಮಾತನಾಡಿ
ಈ ಶಾಲೆಯಲ್ಲಿ ಬುದ್ಧಿಮಾಂದ್ಯ ಹಾಗೂ ವಿಕಲಚೇತನ ಮಕ್ಕಳಿಗೆ ಪ್ರತ್ಯೇಕವಾಗಿ ಆರೈಕೆ ಮಾಡಲಾಗುತ್ತಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರಿಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿರುವ ಮಕ್ಕಳಲ್ಲಿ ಶೇ.50ರಷ್ಟು ಮಕ್ಕಳು ಕಂಪ್ಯೂಟರ್ ಕಲಿತಿದ್ದಾರೆ. ಅವ ರಲ್ಲಿರುವ ಪ್ರತಿಭೆಯನ್ನು ಹೊರತರು ವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಪ್ರಿಯಾಂಕ, ಅಂಕಿತ ಅರುಣೋದಯ ಶಾಲೆಯ ಶಿಕ್ಷಕಿಯರು ಹಾಜರಿದ್ದರು.