70 ವರ್ಷ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆ: ಡಿ.16 ಕ್ಕೆ ಚಾಲನೆ

ಮೈಸೂರು: ಪ್ರಧಾನಮಂತ್ರಿ ವಯ ವಂದನಾ ಯೋಜನೆಯಲ್ಲಿ 70 ವರ್ಷ ಹಾಗೂ ಮೇಲ್ಪಟ್ಟವರು‌ ಹೆಸರು ನೋಂದಾಯಿಸಿಕೊಂಡು 5 ಲಕ್ಷದವರೆಗೆ ಆರೋಗ್ಯ ವಿಮೆ ಮಾಡಿಸಬಹುದಾಗಿದೆ.

ಕೇಂದ್ರ ಸರ್ಕಾರದ ಈ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ಹಿರಿಯರಿಗೆ ತಲುಪಿಸಲು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ತಂಡ ಯುವಕರಿಂದ ಹಿರಿಯರಿಗೆ ನಮನ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಧು ಸೋಮಶೇಖರ್ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಡಿ.16 ಸೋಮವಾರ ಸಂಜೆ 5 ಗಂಟೆಗೆ ಬೋಗಾದಿ ಉತ್ತರ ಬಡಾವಣೆಯ ಉದ್ಯಾನವನದಲ್ಲಿ ಬಿಜೆಪಿ ನಾಗರಾಧ್ಯಕ್ಷ ಎಲ್ ನಾಗೇಂದ್ರ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಡಿಸೆಂಬರ್ 16 ಹಾಗೂ 17ರಂದು ಸಂಜೆ 4 ರಿಂದ 6ರವರೆಗೆ ಸ್ಥಳದಲ್ಲಿಯೇ ಅರ್ಹ ಜನರನ್ನು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ ಉಚಿತವಾಗಿ ನೋಂದಾಯಿಸಲಾಗುತ್ತದೆ.

ನಂತರ ಈ ಸೇವಾ ಕಾರ್ಯವನ್ನು ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಪಡೆಯಲು ಹಾಗೂ ನೋಂದಾಯಿಸಲು 9731761555 ಸಂಖ್ಯೆಗೆ ಕರೆ ಮಾಡಬಹುದು ಮತ್ತು ಸಂದೇಶ ಕಳುಹಿಸಬಹುದು ಎಂದು ಮಧು ಸೋಮಶೇಖರ್ ವಿವರಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲ ಅಧ್ಯಕ್ಷರಾದ ರಾಕೇಶ್ ಭಟ್, ಯುವ ಮೋರ್ಚಾದ ನಗರ ಅಧ್ಯಕ್ಷರಾದ ರಾಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಚಂದನ್ ಗೌಡ, ಸಾಗರ್ ಸಿಂಗ್, ಉಪಾಧ್ಯಕ್ಷರಾದ ಸಿ. ರಾಘವೇಂದ್ರ ಉಪಸ್ಥಿತರಿದ್ದರು.