ಕೊರಗಜ್ಜ ದೈವಸ್ಥಾನದ ಅರ್ಚಕ ತೇಜುಕುಮಾರ್ ನಾಪತ್ತೆ ಆಗಿಲ್ಲ:ತೇಜಸ್ವಿ

Spread the love

ಮೈಸೂರು, ಆ.22:ಮೈಸೂರಿನ ಕೊರಗಜ್ಜ ದೈವಸ್ಥಾನದ ಪ್ರದಾನ ಅರ್ಚಕ ತೇಜುಕುಮಾರ್ ನಾಪತ್ತೆ ಆಗಿಲ್ಲ ಮೈಸೂರಿನಲ್ಲೇ ಇದ್ದಾರೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಹೇಳಿದ್ದಾರೆ.

ಮೈಸೂರು, ಭೂ ವಿವಾದದ ಜತೆಗೆ ಸಂಬಂಧಿಕರ ಕಲಹದಿಂದಾಗಿ ಮೈಸೂರಿನ ರಿಂಗ್ ರಸ್ತೆಯ ಕೇರ್ಗಳ್ಳಿ ಬಳಿ ಇರುವ ಕೊರಗಜ್ಜ ದೇವಸ್ಥಾನಕ್ಕೆ ಕಳೆದ ಒಂದು ತಿಂಗಳಿಂದ ಬೀಗ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ದೇವಸ್ಥಾನದ ಅರ್ಚಕ ತೇಜುಕುಮಾರ್ ದೇವಸ್ಥಾನಕ್ಕೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ ಎಂದು ಯಾರೊ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ತೇಜಸ್ವಿ ಬೇಸರ ವ್ಯಕ್ತಪಡಿಸಿದ್ದಾರೆ.

ತೇಜುಕುಮಾರ್ ಮೈಸೂರಿನಲ್ಲೇ ಇದ್ದಾರೆ ಎಲ್ಲೂ ತಲೆ ಮರೆಸಿಕೊಂಡು ಹೋಗಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ತೇಜುಕುಮಾರ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಇರುವ ಮನುಷ್ಯ ಇಂತವರ‌‌ ಮೇಲೆ ಕೋಟ್ಯಂತರ ರೂಪಾಯಿ ದುಡ್ಡು ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ

ಕೊರಗಜ್ಜ ದೈವದ ಭಕ್ತಾದಿಗಳು ಆತಂಕ ಪಡುವ ಅಗತ್ಯವಿಲ್ಲ ಕೆಲವೇ ದಿನಗಳಲ್ಲಿ ಪ್ರಧಾನ ಅರ್ಚಕರಾದ ತೇಜುಕುಮಾರ್ ಮೈಸೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿ ಎಲ್ಲದಕ್ಕೂ ಉತ್ತರಿಸಲಿದ್ದರೆ ಎಂದು ತೇಜಸ್ವಿ ತಿಳಿಸಿದ್ದಾರೆ.