ಮೈಸೂರು: ನಗರದ ಕಲ್ಯಾಣಗಿರಿ ಡಾ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 15 ರಂದು ವಿಷ್ಣು ದೀಪೋತ್ಸವದ ಪ್ರಯುಕ್ತ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಪೋಸ್ಟರ್ ಗಳನ್ನು ದೇವಸ್ಥಾನದ ಸಂಸ್ಥಾಪಕರಾದ ಎಚ್ ಜಿ ಗಿರಿಧರ್ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಗಿರಿಧರ್, 15 ರ ಭಾನುವಾರದಂದು ಬೆಳಗ್ಗೆ 9ಕ್ಕೆ ದೇವರಿಗೆ ವಿಶೇಷ ಅಲಂಕಾರ ಇರುತ್ತದೆ. ಸಾಮ್ರಾಜ್ಯ ಮಹಾಲಕ್ಷ್ಮೀ ಯಾಗ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ 1ಕ್ಕೆ ಅನ್ನದಾನ, ಸಂಜೆ 5ಕ್ಕೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಸಂಜೆ 6ಕ್ಕೆ ಲಕ್ಷ ದೀಪೋತ್ಸವ ನೆರವೇರಲಿದೆ ಭಕ್ತರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾದ ಸ್ಮಾರ್ಟ್ ಮಂಜು, ಪ್ರಧಾನ ಕಾರ್ಯದರ್ಶಿ ಪದ್ಮನಾಥ್, ದೇವಸ್ಥಾನದ ಅರ್ಚಕರಾದ ದರ್ಶನ್ ಕುಮಾರ್, ನಿಕಿತ್, ಪ್ರಕಾಶ್ ಮತ್ತಿತರರು
ಉಪಸ್ಥಿತರಿದ್ದರು.