ಮೈಸೂರು: ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ ಕೃಷ್ಣ ಅವರು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರ ನಿಧನಕ್ಕೆ ಪಿ ಕಾಳಿಂಗರಾವ್ ಗಾನಮಂಟಪ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಮೊಂಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ವೇಳೆ ಅಯೂಬ್ ಖಾನ್ ಮಾತನಾಡಿದರು.
2004ನೇ ಇಸವಿಯಲ್ಲಿ ನಾನು ಮೈಸೂರಿನ ಉಪ ಮಹಾಪೌರ ನಾಗಲು ಮುಖ್ಯಮಂತ್ರಿಯಾಗಿದ್ದ ಎಸ್
ಎಂ ಕೃಷ್ಣ ಅವರು ನನ್ನ ನಾಯಕತ್ವವನ್ನು ಗುರುತಿಸಿ ಅವಕಾಶ ಕಲ್ಪಿಸಿದ್ದರು ಎಂದು ಸ್ಮರಿಸಿದರು.
ಮೈಸೂರಿನಲ್ಲಿ ಹೊರವರ್ತುಲ ರಸ್ತೆ, ರಾಜ್ಯ ಹೆದ್ದಾರಿ ಚತುಷ್ಪಥ ರಸ್ತೆ ಅಭಿವೃದ್ಧಿ, ಮೈಸೂರಿನ ಇನ್ಪೋಸಿಸ್ ಸೇರಿದಂತೆ ಐಟಿ ಬಿಟಿ ಕ್ಷೇತ್ರಕ್ಕೆ ಪ್ರೋತ್ಸಾಹ, ಚಾಮುಂಡಿ ಬೆಟ್ಟ, ನಂಜನಗೂಡು ದೇವಸ್ಥಾನ ಅಭಿವೃದ್ದಿ, ಸಹಾಕರಿ ಕ್ಷೇತ್ರದಲ್ಲಿ ಯಶಸ್ವಿನಿ ಯೋಜನೆ, ಆರ್ಥಿಕವಾಗಿ ನೆರವಾಗಲು ಸ್ತ್ರಿಶಕ್ತಿ ಸಂಘಗಳ ಸ್ಥಾಪನೆ,ಬರಗಾಲದಲ್ಲಿ ಬಿತ್ತನೆ ಮೋಡ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡರು.
ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ, ವಿಧಾನ ಸಭಾಧ್ಯಕ್ಷರಾಗಿ, ಕೇಂದ್ರದ ಮಾಜಿ ಸಚಿವರಾಗಿ ಅಜಾತಶತ್ರು ಎನ್ನಿಸಿಕೊಂಡು ಮೌಲ್ಯಯುತ ರಾಜಕಾರಣದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿದ್ದಾರೆ ಎ ಇಂದಿನಯುವ ರಾಜಕಾರಣಿಗಳಿಗೆ ಅವರು ಆದರ್ಶವಾಗಿದ್ದಾರೆ ಎಂದು ಆಯೂಬ್ ಖಾನ್ ಹೇಳಿದರು.
ಮಾಜಿ ಶಾಸಕರು ಮತ್ತು ಹಾಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಜಯಣ್ಣ ಅವರು ಸಾಕಷ್ಟು ಸಾಮಜಮುಖಿ ಕೆಲಸಗಳನ್ನ ಮಾಡಿ ಹಲವಾರು ಶ್ರಮಿಕ ವರ್ಗದವರನ್ನ ಮುಖ್ಯವಾಹಿಮಿಗೆ ತಂದಿದ್ದಾರೆ ಎಂದು ತಿಳಿಸಿದರು
ಮಾಜಿ ಮಹಾಪೌರರಾದ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಮಾಜಿ ಸದಸ್ಯರಾದ ಫೈರೋಜ್ ಖಾನ್, ರಘುರಾಜೇ ಅರಸ್, ಶೌಕತ್ ಅಲಿಖಾನ್, ಜಿಪಿಎ ಮಲ್ಲಿಕಾರ್ಜುನ, ರಂಗಸ್ವಾಮಿ ಪಾಪು, ಪದ್ಮನಾಭನ್ ಗುಂಡಾ, ಮೆಲ್ಲಹಳ್ಳಿ ರಾಜೇಶ್ ಸಿ ಗೌಡ, ಮಹೇಂದ್ರ ಕಾಗಿನೆಲೆ, ಸುಬ್ರಹ್ಮಣ್ಯ, ಹರೀಶ್ ಮೊಗ್ಗಣ್ಣಚಾರ್, ಪ್ರವೀಣ್, ಜಯಲಕ್ಷ್ಮಿ, ವನಜಾಕ್ಷಿ, ಎಸ್. ಪಿ ಸಿದ್ದರಾಜೆ ಅರಸ್, ನಾಗೇಶ್, ಗುರುರಾಜ್ , ಈಶ್ವರ್ ಚಕ್ಕಡಿ ಮತ್ತಿತರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.