ಮೈಸೂರು: ಮೈಸೂರಿನ ಸಮುಚ್ಛೇದ ವಸತಿ ನಿಲಯದಲ್ಲಿ ಮಕ್ಕಳಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅರಿವು ಮೂಡಿಸಲಾಯಿತು.
ಶ್ರೀ ಪತಂಜಲಿ ಯೋಗ ಶಿಕ್ಷಣದವರು ಎರಡು ಪಾಳೆಯಲ್ಲಿ ಉಚಿತ ಯೋಗ ತರಬೇತಿಗಳು ನಡೆಯುತ್ತಿದ್ದಾರೆ.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮೈಸೂರು ಸಂಚಾಲಕ ಗಿರೀಶ್ ಯೋಗ ಬಂಧುಗಳ ಜೊತೆ ಸೇರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ, ಮಕ್ಕಳಿಗೆ ಕನ್ನಡ ನಾಡು-ನುಡಿಯ ಬಗ್ಗೆ ತಿಳಿಸಿದರು.
ಮೊದಲಿಗೆ ಶ್ರೀ ಪತಂಜಲಿ ಗುರುಗಳ ಭಾವಚಿತ್ರ ಮತ್ತು ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಯಿತು.
ವಸತಿ ನಿಲಯದ ನಿಲಯಪಾಲಕರುಗಳಾದ ಯಶೋಧ ಮತ್ತು ಚಂದನ ಪುಷ್ಪನಮನ ಸಲ್ಲಿಸಿದರು.
ಶ್ರೀ ಪತಂಜಲಿ ಯೋಗ ಸಮಿತಿಯ ಯೋಗದವರ ಮಕ್ಕಳು ಕನ್ನಡದ ಬಗ್ಗೆ ಕಾರ್ಯಕ್ರಮ ನಡೆಸಿಕೊಟ್ಟರು.
ಜೀವಿತ ಭರತನಾಟ್ಯ, ಅಮೃತ ಏಕಪಾತ್ರ ಅಭಿನಯ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಕನ್ನಡದ ಬಗ್ಗೆ ಹಾಡುಗಳನ್ನು ಹಾಡಿ ಜೊತೆಗೆ ನೃತ್ಯ ಮಾಡಿ ಎಲ್ಲರ ಮನಗೆದ್ದರು.